ಬೆಂಗಳೂರು: ನನ್ನನ್ನು ಜಾತ್ಯತೀತ ಜನತಾದಳ ಪಕ್ಷದ ಪರಿಶಿಷ್ಠ ಪಂಗಡ ವಿಭಾಗದ ರಾಜ್ಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ರವರಿಗೆ ಮತ್ತು ಪಕ್ಷದ ರಾಜ್ಯ ಅಧ್ಯಕ್ಷರಾದ ಹೆಚ್.ಕೆ.ಕುಮಾರಸ್ವಾಮಿ ರವರಿಗೆ ಎಂಎಲ್ ಎ ರಾಜವೆಂಕಟ್ಟಪ್ಪ ನಾಯಕ್ ಅವರು ಧನ್ಯವಾದ ತಿಳಿಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಅಸೆಂಬ್ಲಿ ಚುನಾವಣೆಗೆ ಪೂರ್ವ ತಯಾರಿ ಆರಂಭಿಸಿರುವ ಜಾತ್ಯಾತೀತ ಜನತಾದಳ, ಕೋರ್ ಕಮಿಟಿಯಲ್ಲಿ ಹಲವು ಬದಲಾವಣೆಯನ್ನು ಮಾಡಿದೆ.