ಬೆಂಗಳೂರು: ಕೊರೊನಾ ಮಹಾಮಾರಿಯಿಂದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನೆರವಿಗಾಗಿ ದೇಶದ ಪ್ರತಿಷ್ಠಿತ ಸಂಸ್ಥೆಯಾದ ಆದಿತ್ಯ ಬಿರ್ಲಾಪೌಂಡೇಶನ್ನಿಂದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಿದೆ.
1ನೇ ತರಗತಿಯಿಂದ 2 ನೆಪಿಯುಸಿವರೆಗೂ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಜನವರಿ31 ಕಡೇ ದಿನಾಂಕವಾಗಿದೆ ಸಂಸ್ಥೆ ತಿಳಿಸಿದೆ.
ಅರ್ಜಿಗಳನ್ನು ಸಂಸ್ಥೆಯ ಅಧಿಕೃತ ವೆಬ್ಸೈಟ್ www.b4s.in/a/ABCC1 ಅನ್ನುಸಂಪರ್ಕಿಸಿ. ಅರ್ಜಿಸಲ್ಲಿಸಿದ ವಿದ್ಯಾರ್ಥಿಗಳಿಗೆ 60 ಸಾವಿರ ರೂ.ಗಳವರೆಗೂ ವಿದ್ಯಾರ್ಥಿವೇತನ ದೊರೆಯಲಿದ್ದು, ಇದನ್ನು ಅವರ ಉತ್ತಮ ತರಬೇತಿ, ಕೌನ್ಸಿಲಿಂಗ್, ಹಾಸ್ಟೆಲ್, ಊಟ, ಇನ್ನಿತರ ವಿದ್ಯಾಭ್ಯಾಸಸಂಬಂಧ ಪಟ್ಟವಿಷಯಗಳಿಗೆ ಬಳಸಿಕೊಳ್ಳಬಹುದು.
ಕೊರೊನಾದಿಂದ ಪೋಷಕರನ್ನುಕಳೆದುಕೊಂಡ 1 ರಿಂದ 8 ತರಗತಿಯವರೆಗೆವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ24 ಸಾವಿರ ರೂಪಾಯಿಹಾಗೂ9 ರಿಂದ 12 ನೆತರಗತಿವರೆಗೆವಿದ್ಯಾಭ್ಯಾಸಮಾಡುತ್ತಿರುವವರಿಗೆ30 ಸಾವಿರದವರೆಗೂ ವಿದ್ಯಾರ್ಥಿವೇತನ ಸಿಗಲಿದೆ.
ಅರ್ಜಿಸಲ್ಲಿಸುವವರು ಕಡ್ಡಾಯವಾಗಿ ಭಾರತೀಯರಾಗಿರಬೇಕು ಎಂದು ಸಂಸ್ಥೆ ವಿಶೇಷ ಸೂಚನೆ ನೀಡಿದೆ. ಅರ್ಜಿಸಲ್ಲಿಸುವ ವಿದ್ಯಾರ್ಥಿಗಳು ಕಳೆದ ವರ್ಷವ್ಯಾಸಂಗದ ಅಂಕಪಟ್ಟಿ, ಸರ್ಕಾರದಿಂದ ಮಂಜೂರಾದ ಪ್ರಮಾಣ ಪತ್ರ(ಪೋಷಕರುಆಧಾರ್ಕಾರ್ಡ್, ಮತದಾನ ಗುರುತಿನ ಚೀಟಿ, ಡ್ರೈವಿಂಗ್ಲೈಸನ್ಸ್ಇತರೆ), ವಿದ್ಯಾರ್ಥಿಗಳ ಪ್ರಸಕ್ತಸಾಲಿನ ಶಾಲೆಯ ಗುರುತಿನ ಚೀಟಿ, ಪೋಷಕರು ಕೊರೊನಾದಿಂದ ಮೃತಪಟ್ಟ ದೃಢೀಕರಣ ಪತ್ರ, ಅರ್ಜಿಸಲ್ಲಿಸುವ ವಿದ್ಯಾರ್ಥಿಗಳ ಅಥವಾ ಪೋಷಕರ ಬ್ಯಾಂಕ್ ಅಕೌಂಟ್ನಂಬರ್, ಭಾವಚಿತ್ರ. ಇನ್ನುಹೆಚ್ಚಿನ ಮಾಹಿತಿಗಾಗಿ ಆದಿತ್ಯ ಬಿರ್ಲಾಪೌಂಡೇಶನ್ನ ವೆಬ್ಸೈಟ್ www.b4s.in/a/ABCC1 ಅನ್ನುಸಂಪರ್ಕಿಸಿ.