ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಸೇವಾ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅರಣ್ಯ ವಸತಿ ಹಾಗೂ ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ.ಅಪ್ಪಣ್ಣನವರು ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಸಾರಿಗೆ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಬಿ.ಶ್ರೀರಾಮುಲು ಅವರು ಉದ್ಘಾಟಿಸಿದರು, ಮಾಜಿ ಸಂಸದರಾದ ಶ್ರೀ ವಿ.ಎಸ್.ಉಗ್ರಪ್ಪನವರು, ಕಾಂಗ್ರೆಸ್ ಮುಖಂಡರಾದ ಶುಭಾ ಅವರು, ವಿವಿಧ ಮಠಗಳ ಪೂಜ್ಯ ಶ್ರೀಗಳು ಸಾನಿಧ್ಯವಹಿಸಿದ್ದರು.
ಕಾರ್ಯಕ್ರಮ ಆಯೋಜಕರಾದ ಶ್ರೀ ಅಂಬರೀಶ ಗುಡದಾರ ಅವರು, ಪತ್ರಕರ್ತರಾದ ಶ್ರೀ ರಮೇಶ್ ಹಿರೆ ಜಂಬೂರು, ಸಮಾಜದ ಗಣ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.