ಮೈಸೂರು: ಜಲದರ್ಶಿನಿ ಅತಿಥಿಗೃಹದಲ್ಲಿ ಮಾನ್ಯ ಸಂಸದರಾದ ಪ್ರತಾಪ್ ಸಿಂಹ ಅವರನ್ನು ಕೇಂದ್ರ ಪರಿಹಾರ ಸಮಿತಿ ನಿಗಮದ ಅಧ್ಯಕ್ಷರಾದ ಎಂ.ರಾಮಚಂದ್ರ ರವರ ನೇತೃತ್ವದಲ್ಲಿ ನಾಯಕ ಸಮಾಜದ ಪರ್ಯಾಯ ಪದ “ಪರಿವಾರ” ಎಸ್ಟಿ ಸೇರಿದ್ದರು.
ಸಿ.ಆರ್ ಇ.ಸೆಲ್ ನಲ್ಲಿ, ಪರಿವಾರಕ್ಕೆ ಸಂಬಂಧಿಸಿದ ತನಿಖೆ,ಹಳೆ ಪ್ರಕರಣಗಳನ್ನು ಕೈಬಿಡುವಂತೆ ಹಾಗೂ ಇನ್ನೂ ಗೊಂದಲ ನಿವಾರಣೆ ಬಗೆಹರಿಸಲು ಸಂಸದರಾದ ನೀವು ಮುಖ್ಯಮಂತ್ರಿಗಳ ಬಳಿ ಮಾತನಾಡಿ ನಮ್ಮ ಸಮಸ್ಯೆ ಬಗೆಹರಿಸಲು ನಮ್ಮ ನಿಮ್ಮ ನೇತೃತ್ವದಲ್ಲಿ ನಿಯೋಗ ತೆರಳಬೇಕೆಂದು ಮಾನ್ಯ ಪರಿಹಾರ ಸಮಿತಿ ಅಧ್ಯಕ್ಷರಾದ ರಾಮಚಂದ್ರ ಅವರ ಮುಖಂಡತ್ವದಲ್ಲಿ ಮನವಿ ಮಾಡಿದರು.
ವಾಲ್ಮೀಕಿ ನಾಯಕ ನೌಕರರ ಸಂಘ ಕೆಎಎಸ್ ಅಧಿಕಾರಿಗಳಾದ ಮಹದೇವ ನಾಯಕರು ಮತ್ತು ಇಂಜಿನಿಯರ್ ಜಗದೀಶ್ ಹಲವಾರು ದಾಖಲೆಗಳನ್ನು ಸಂಗ್ರಹಿಸಿ ಸಿದ್ದ ಪಡಿಸಿದ ಮನವಿಯನ್ನು ಸಂಸದರಿಗೆ ನೀಡಲಾಯಿತು. ಹಾಗೂ ಹೊಸವರ್ಷದ ಶುಭಾಶಯಗಳನ್ನು ತಿಳಿಸಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಸಂಸದರು ಮಾನ್ಯ ಜಿಲ್ಲಾಧಿಕಾರಿಗಳೊಡನೆ ದೂರವಾಣಿ ಮುಖಾಂತರ ಚರ್ಚಿಸಿ ಸಮಸ್ಯೆಯ ಬಗ್ಗೆ ವಿವರಣೆಯನ್ನು ಪಡೆದರು .ಹಾಗೂ ಪರಿವಾರ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವಾಸ್ತವದ ಮಾಹಿತಿಯನ್ನು ನೀಡಿದರು .
ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬೆಂಗಳೂರಿಗೆ ಹೊರಟು ದಿನಾಂಕವನ್ನು ನಿಗದಿಪಡಿಸಿದ ನಂತರ ನಿಯೋಗ ಹೊರಡಲು ಸಿದ್ದವಿರಲು ನಾಯಕ ಸಮಾಜ ಮುಖಂಡರಿಗೆ ಹಾಗೂ ನೌಕರರಿಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ವಾಲ್ಮೀಕಿ ನಾಯಕ ನೌಕರರ ಸಂಘದ ಬಿಇಓ ಕೃಷ್ಣ ಅವರು, ಟೆನ್ನಿಸ್ ಗೋಪಿ ಅವರು,ವಿರನಗೆರೆ ದೇವರಾಜು, ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷರಾದ ದೇವರಾಜ್ ಟಿ, ಕಾಟೂರ್, ಉಪಾಧ್ಯಕ್ಷರಾದ ಶಿವಕುಮಾರಸ್ವಾಮಿ, ಕ್ಯಾತಮಾರನಹಳ್ಳಿ ಪ್ರಕಾಶನಾಯಕ,ಕಣಯ್ಯನಹುಂಡಿ ಸಿದ್ದರಾಜು,ದೊಡ್ಡಹನಸೊಗೆ ಚಂದ್ರನಾಯಕ,ಬೇರ್ಯ ಕರಿಯನಾಯಕ , ನಾಗವಾಲ ತಿಮ್ಮನಾಯಕ,ಕೋಟೆ ನಿಂಗರಜು ,ರಾಮನಾಯಕರು,ಹಿನಕಲ್ ಚಂದ್ರು ರವರು ಉಪಸ್ಥಿತಿತರಿದ್ದರು.