ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ಯೋಗ ಅಭ್ಯಾಸ ಅಳವಡಿಸಿಕೊಳ್ಳಿ: ರಂಗಪ್ಪ

ಮಸ್ಕಿ : ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ಯೋಗ ಅಭ್ಯಾಸ ಅಳವಡಿಸಿಕೊಳ್ಳಿ ಎಂದು ಪ್ರಾಂಶುಪಾಲರದ ರಂಗಪ್ಪ ಮಂಗಳವಾರ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಯೋಗ ಸೂರ್ಯ ನಮಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಹಳ ಜನ ಯೋಗವನ್ನು ನಿರಂತರ ಮಾಡಲು ಹಿಂಜರಿಯುತ್ತಿರುವುದು ಸರಿಯಲ್ಲ. ಯೋಗ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯವಂತ ಸಮಾಜವನ್ನು ನಿರ್ಮಿಸಬಹುದು ಎಂದು ಹೇಳಿದರು.

ನಮತರ ಮಾತನಾಡಿದ ಉಪನ್ಯಾಸಕರಾದ ರಂಗಯ್ಯ ಶೆಟ್ಟಿ ಅವರು, ಇಂದಿನ ಯಾಂತ್ರಿಕಜೀವನದಲ್ಲಿ ಒತ್ತಡಕ್ಕೆ ಒಳಗಾಗಿ ಮನುಷ್ಯ ನಾನಾ ರೋಗಗಳಿಗೆ ಬಲಿಯಾಗುತ್ತಿದ್ದಾನೆ. ಆಹಾರ, ಗಾಳಿ,ನೀರು, ಮಲೀನವಾಗಿದೆ. ಇವುಗಳಿಂದ ದೂರ ಉಳಿಯಬೇಕಾದರೆ ಯೋಗವೊಂದೆ ಪರಿಹಾರ ಮತ್ತು ಸರ್ವ ರೋಗಗಳಿಗೆ ಯೋಗವೇ ಮದ್ದು. ಯೋಗ ಆಯುರ್ವೇದದಿಂದ ರೋಗಗಳು ದೂರವಾಗುತ್ತದೆ. ಮಾನಸಿಕವಾಗಿ ಶಾರೀರಕವಾಗಿ ಮನಸ್ಸು, ಬುದ್ಧಿ, ಏಕಕಾಲಕ್ಕೆ ಚೈತನ್ಯ ನೀಡುವ ಸಾಧನೆ ಯೋಗವಾಗಿದೆ ಎಂದು ಹೇಳಿದರು.

ಈ ವೇಳೆಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಶಂಕರಗೌಡ ಉಪನ್ಯಾಸಕರು  ಅವರು, 10ನಿಮಿಷಗಳ ಕಾಲ ಸೂರ್ಯ ನಮಸ್ಕಾರ ಯೋಗವನ್ನು ಅಭ್ಯಾಸ ಮಾಡಿಸಿದರು. ಪ್ರಾಂಶುಪಾಲರು  ರಂಗಪ್ಪ, ಉಪನ್ಯಾಸಕರಾದ ರಂಗಯ್ಯ ಶೆಟ್ಟಿ, ಮಾಂತೇಶ, ಶರಣಯ್ಯ, ಶಂಕರಗೌಡ, ವಿನಾಯಕ ರಾವ, ನಿಂಗಪ್ಪ, ಮತ್ತುವಿದ್ಯಾರ್ಥಿಯರು ಮತ್ತು ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading