ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟ ರಾಜ್ ಬಿ ಶೆಟ್ಟಿಗೆ ಸರ್ಪ್ರೈಸ್ ಕರೆ ಮಾಡಿದ್ದಾರೆ. ತಮ್ಮ ಗುರುತನ್ನು ಹೇಳಿಕೊಳ್ಳದ ಶಿವಣ್ಣ, ಮಾಸ್ ಸ್ಟೈಲ್ನಲ್ಲೇ ರಾಜ್ ಶೆಟ್ಟಿ ಕಾಲೆಳೆದಿದ್ದಾರೆ.
‘ಗರುಡ ಗಮನ ವೃಷಭ ವಾಹನ’ ಓಟಿಟಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಜೀ5ನಲ್ಲಿ ತೆರೆಕಾಣುತ್ತಿರುವ ಈ ಚಿತ್ರದ ಪ್ರಚಾರ ಹಾಗೂ ರಿಲೀಸ್ ದಿನಾಂಕವನ್ನು ವಿಭಿನ್ನವಾಗಿ ವೀಕ್ಷಕರ ಮುಂದಿಡಲಾಗಿದೆ. ಈಗಾಗಲೇ ಜೀ5ಲ್ಲಿ ಬಿಡುಗಡೆಯಾಗಿರುವ ‘ಭಜರಂಗಿ 2’ ದಾಖಲೆಯ ವೀಕ್ಷಣೆಯೊಂದಿಗೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಂತಸದಲ್ಲಿರುವ ಶಿವಣ್ಣ ರಾಜ್ ಬಿ ಶೆಟ್ಟಿಗೆ ಕರೆ ಮಾಡಿದ್ದಾರೆ. ಇವರಿಬ್ಬರ ನಡುವಿನ ಮಾತುಕತೆ ಸಖತ್ ಮಜಾ ಕೊಡುತ್ತೆ. ಶಿವಣ್ಣ ಎಂದು ಕಡೆಯಲ್ಲಿ ರಾಜ್ ಬಿ ಶೆಟ್ಟಿಗೆ ತಿಳಿಯುತ್ತೆ.
ಯಾರು ನೀವು ಏನ್ ಮಾತಾಡ್ತಾ ಇದಿರಾ’ ಎಂದು ರಾಜ್ ಪ್ರಶ್ನಿಸಿದ್ದು, ಶಿವಣ್ಣ’ ನಾನು ಭಜರಂಗಿ’ ಎಂದಿದ್ದಾರೆ. ಕ್ಷಣ ಯೋಚಿಸಿದ ನಂತರ ಶಿವಣ್ಣನ ವಾಯ್ಸ್ ಎಂದು ರಾಜ್ ಶೆಟ್ಟಿಗೆ ಗೊತ್ತಾಗಿದೆ ‘ನೀವೇನೂ ದೊಡ್ಡ ಡಾನ್ ಶಿವಣ್ಣ’ ಎಂದು ಹೇಳಿ ನಕ್ಕಿದ್ದಾರೆ ರಾಜ್!
ನವೆಂಬರ್ 19 ರಂದು ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಥಿಯೇಟರ್ ಗೆ ಎಂಟ್ರಿ ಕೊಟ್ಟಿತ್ತು. ರಿಷಬ್ ಹಾಗೂ ರಾಜ್ ಕಾಂಬಿನೇಷನ್ ಗೆ ಪ್ರೇಕ್ಷಕ ಜೈಕಾರ ಹಾಕಿದ್ದರು. ಪ್ರೇಕ್ಷಕರು ಮೆಚ್ಚಿದ್ದ ವಿಭಿನ್ನ ಬಗ್ಗೆಯ ಈ ಸಿನಿಮಾದ ಒಟಿಟಿ ಹಕ್ಕು ಜೀ5 ಖರೀದಿ ಮಾಡಿತ್ತು. ಅದರಂತೆ ಸಂಕ್ರಾಂತಿ ಹಬ್ಬದ ಶುಭ ದಿನದಂದೂ ಅಂದ್ರೆ ಜನವರಿ 13ರಂದು ಜೀ5 ಅಂಗಳಕ್ಕೆ ರಿಷಬ್ ಹಾಗೂ ರಾಜ್ ಸಿನಿಮಾ ‘ಗರುಡ ಗಮನ ವೃಷಭ ವಾಹನ’ ಲಗ್ಗೆ ಇಡ್ತಿದೆ. ಹೀಗಾಗಿ ಸಿನಿಮಾಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ.