ಬೆಂಗಳೂರು ಇತಿಹಾಸ ವೈಭವ ಸರಣಿಯ ಮೊದಲ ಸಂಚಿಕೆ “ಸಿಂಗಾಪುರ” ಇತಿಹಾಸ ಮಾಲಿಕೆ ಬಿಡುಗಡೆ

ಸಿಂಗಾಪುರ ದಿನವೆಂದು ಆಚರಿಸಿ “ಬೆಂಗಳೂರು ಇತಿಹಾಸ ವೈಭವ” ಸರಣಿಯ ಮೊದಲ ಸಂಚಿಕೆ “ಸಿಂಗಾಪುರ” ಇತಿಹಾಸ ಮಾಲಿಕೆಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮವನ್ನು ಸ್ಥಳೀಯರೇ ಅದ್ಧೂರಿಯಾಗಿ ನೆರವೇರಿಸಿಕೊಟ್ಟರು ಹಾಗೂ ಸ್ಥಳೀಯರೇ ತಮ್ಮ ಗ್ರಾಮದ ಇತಿಹಾಸವನ್ನು ಹೇಳಿದ್ದು ಸಂತೋಷದ ವಿಚಾರ.

ಈ ಕಾರ್ಯಕ್ರಮಕ್ಕೆ ಆಗಮಿಸಿದ ದಿ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿಗಳಾದ ವಿ.ನಾಗರಾಜ್ ಅವರಿಗೆ, ಕೋಶಾಧ್ಯಕ್ಷರಾದ ಹಿರಿಆಣ್ಣಯ್ಯ ಅವರಿಗೆ, ದಿ ಮಿಥಿಕ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರಾದ ಡಾ.ವಿ ಅನುರಾಧ ಅವರಿಗೆ, ದಿ ಮಿಥಿಕ್ ಸೊಸೈಟಿಯ ಸಂಶೋಧಕರಾದ ಡಾ.ಪಿ ಜಯಸಿಂಹ ಅವರಿಗೆ, ಶಾಸನ ತಜ್ಞರುಗಳಾದ ಡಾ.ಹೆಚ್.ಎಸ್ ಗೊಪಾಲರಾವ್ ಅವರಿಗೆ, ಡಾ.ಪಿ.ವಿ ಕೃಷ್ಣಮೂರ್ತಿ ಅವರಿಗೆ, ಪ್ರೋ. ಕೆ.ಆರ್ ನರಸಿಂಹನ್ ಅವರಿಗೆ, ಡಾ.ಎನ್.ಆರ್ ಲಲಿತಾಂಬ ಅವರಿಗೆ, ಕೆ ಧನಪಾಲ್ ಅವರಿಗೆ, ವಾಸ್ತುಶಿಲ್ಪ ತಜ್ಞರಾದ ಯಶಸ್ವಿನಿ ಶರ್ಮಾರವರಿಗೆ, ಐ.ಸಿ.ಹೆಚ್.ಆರ್ ನಿರ್ದೇಶಕರಾದ ಡಾ.ಎಸ್.ಕೆ ಅರುಣಿಯವರಿಗೆ ಹಾಗೂ ದಿ ಮಿಥಿಕ್ ಸೊಸೈಟಿಯ ಶಾಸನಗಳ 3ಡಿ ಡಿಜಿಟಲ್ ಸಂರಕ್ಷಣಾ ಯೋಜನೆಯ ಗೌರವ ನಿರ್ದೇಶಕರಾದ ಪಿ ಎಲ್ ಉದಯ ಕುಮಾರ್ ಅವರಿಗೆ ಹಾಗೂ ತಂಡದ ಸದಸ್ಯರಾದ ಡಾ. ಆರ್ ಯುವರಾಜು, ಡಾ.ಎಂ ಜಿ ಭೈರಪ್ಪ, ಡಾ.ಮಧುಸೂದನ ಎಂ ಎನ್, ಶಶಿಕುಮಾರ ನಾಯ್ಕ ಕೆ ಸಿ ಅವರಿಗೆ ಸಿಂಗಾಪುರದ ಸ್ಥಳಿಯರು ಗೌರವಪೂರ್ವಕವಾಗಿ ಸನ್ಮಾನಿಸಿದರು. ಸನ್ಮಾನ ಮಾಡಿದ ಸಿಂಗಾಪುರದ ಮೋಹನ್ ನಾಯಕ್, ವಿ ಶ್ರೀನಿವಾಸ್, ಶ್ರೀ ವರದರಾಜಸ್ವಾಮಿ ಸೇವಾ ಸಮಿತಿಯ ಎಲ್ಲಾ ಸದಸ್ಯರಿಗೂ ಹಾಗೂ ಸಿಂಗಾಪುರದ ಗ್ರಾಮಸ್ಥರೆಲ್ಲರಿಗೂ ಪ್ರೀತಿಪೂರ್ವಕ ಧನ್ಯವಾದಗಳು.

ಸಂಚಿಕೆಯ ಇ-ಕಾಪಿಯನ್ನು ಕೆಳಗಿನ ಲಿಂಕ್ ಮೂಲಕ ಪಡೆಯಬಹುದು – ಸಿಂಗಾಪುರ

Discover more from Valmiki Mithra

Subscribe now to keep reading and get access to the full archive.

Continue reading