ಗದಗ ನವೆಂಬರ್ ೨೯: ಕರ್ನಾಟಕ ವಿಶ್ವ ಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅ) ಸುವಿಧಾ ತಂತ್ರಾಂಶದ ಮುಖಾಂತರ ಆನ್ ಲೈನ್ ಅರ್ಜಿ ಸ್ವೀಕೃತಿ : ಅರಿವು ಶೈಕ್ಷಣಿಕ ಸಾಲ ಯೋಜನೆ ನವೀಕರಣ , ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಈಗಾಗಲೇ ಕಳೆದ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿಯಲ್ಲಿ ಸೌಲಭ್ಯ ಪಡೆದ ವಿದ್ಯಾರ್ಥಿಗಳಿಗೆ ೨೦೨೧-೨೨ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ಮುಂದುವರೆದ ಕಂತುಗಳಿಗೆ (೩,೪,೫ನೇ ಕಂತುಗಳು) ಸುವಿಧಾ ತಂತ್ರಾಂಶ https://suvidha.karnataka.gov.in ಜಾಲತಾಣದೊಂದಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆ) ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು ಯೋಜನೆ , ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ , ಬ್ಯಾಂಕ ಸಹಯೋಗದೊಂದಿಗೆ ಸಾಲ ಮತ್ತು ಸಹಾಯಧನ ಯೋಜನೆ, ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಯೋಜನೆ, ಮಹಿಳೆಯರಿಗೆ ಮೈಕ್ರೋ ಕ್ರೆಡಿಟ್ ಸಾಲ ಯೋಜನೆಗಳಿಗೆ ಈ ಹಿಂದಿನಂತೆಯೇ ನೇರವಾಗಿ ಆಫ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಬಯಸುವವರು ಹಿಂದುಳಿದ ವರ್ಗಗಳ ವಿಶ್ವಕರ್ಮ ಸಮುದಾಯಗಳ ಹಾಗೂ ಇದರ ಉಪಜಾತಿಗಳ ಅರ್ಜಿದಾರರು ಈ ಹಿಂದಿನಂತೆಯೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ರೂ.ನಂ: ೨೦೨, ೨ನೇ ಮಹಡಿ, ಜಿಲ್ಲಾ ಆಡಳಿತ ಭವನ, ಗದಗ ಜಿಲ್ಲೆ ಹಾಗೂ ಆಯಾ ತಾಲೂಕಿನ ವಿಸ್ತೀರ್ಣಾಧಿಕಾರಿಗಳು, ಹಿಂದುಳಿದ ವರ್ಗಗಳ ಇಲಾಖೆ, ಮತ್ತು ನಿಗಮದ ವೆಬ್‌ಸೈಟ್ https://kvcdcl.karnataka.gov.in ಜಿಲ್ಲಾ ಕಛೇರಿ ದೂರವಾಣಿ ಸಂ: ೦೮೩೭೨-೨೩೨೩೨೭ ನ್ನು ಸಂಪರ್ಕಿಸಿ ಅರ್ಜಿ ನಮೂನೆಗಳನ್ನು ಪಡೆದು ಅಗತ್ಯ ದಾಖಲಾತಿಗಳನ್ನು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ/ದಾಖಲಾತಿಗಳೊಂದಿಗೆ ದಿನಾಂಕ: ೧೦-೦೧-೨೦೨೨ ರೊಳಗೆ ಸಲ್ಲಿಸಬಹುದಾಗಿದೆ.