ಶ್ರೀ ಶಿವಕುಮಾರ ಸ್ವಾಮೀಜಿ ಅಕಾಡೆಮಿಕ್ ಕೋಚಿಂಗ್ ಸೆಂಟರ್ ಬುಳ್ಳಾಪುರ ವತಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಗ್ರಾಮೀಣ ಭಾಗದ ವಿದ್ಯಾರ್ಥಿ ನಾಗಲಿಂಗ ತಂದೆ ಗಂಗಪ್ಪ ಬುಳ್ಳಾಪೂರ ಇವರಿಗೆ ಸನ್ಮಾನಿಸಲಾಯಿತು. ಇದರ ರೂವಾರಿಯಾದ ಲಕ್ಷ್ಮಣ ನಾಯಕ ಬಳ್ಳಾಪುರ, ಗ್ರಾಮ ಪಂಚಾಯತ್ ಸದಸ್ಯರಾದ ಸಣ್ಣ ದುರ್ಗಯ್ಯ, ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಯುತ ಯಲ್ಲಪ್ಪ, ಬುಳ್ಳಾಪುರ ಗ್ರಾಮದ ಹಿರಿಯರಾದ ಹೊನ್ನಪ್ಪ ಅಂಗಡಿ, ಮತ್ತು ಎಸ್. ಕೆ. ಎಸ್. ಕೋಚಿಂಗ್ ಸೆಂಟರ್ ನ ಮುಖ್ಯ ಗುರುಗಳಾದ ಹನುಮಂತ ಡೊಣಮರಡಿ, ಮತ್ತು ಊರಿನ ಗಣ್ಯ ವ್ಯಕ್ತಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಯಿತು
ವರದಿ: ದೇವರಾಜ ನಾಯಕ ಮಾನವಿ.