ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರು ಇಡೀ ಜಗತ್ತಿನ ಜನರ ಮನಸಿನಲ್ಲಿ ಉಳಿಯಲಿದ್ದಾರೆ : ಸಣ್ಣ ಕನಕಪ್ಪ ಕನಕಗಿರಿ

ಭಾರತೀಯ ಜನತಾ ಪಾರ್ಟಿ ಕನಕಗಿರಿ ಮಂಡಲದ ವತಿಯಿಂದ ಹೆಮ್ಮೆಯ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಯವರ ನೇತೃತ್ವದ ಕೇಂದ್ರ ಸರ್ಕಾರದ 7ವರ್ಷಗಳ ಸಾಧನೆಯ ಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಪಟ್ಟಣದ ಆರಾಧ್ಯ ದೇವರಾದ ಶ್ರೀ ಕನಕಾಚಲಪತಿ ದೇವಸ್ಥಾನ ದ ಹತ್ತಿರದ ಪಕ್ಕದಲ್ಲಿ ಪಬ್ಲಿಕ್ ಜಾಗದಲ್ಲಿ ಆಯೋಜಿಸಲಾಯಿತು ಕನಕಗಿರಿ ಮಂಡಲ ಅಧ್ಯಕ್ಷರಾದ ಶ್ರೀ ಮಹಾಂತೇಶ್ ಸಜ್ಜನ್, ಹಾಗೂ ಕನಕಗಿರಿ ಜನಪ್ರಿಯ ಶಾಸಕರ ಸುಪುತ್ರರು ಹಾಗೂ ಕೊಪ್ಪಳ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಮೌನೇಶ್ ದಡೇಸೂಗೂರು ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು , ನಂತರ ಮಹಾಂತೇಶ್ ಸಜ್ಜನ್ ಮಾತನಾಡಿ ಮಾನ್ಯ ದೇಶದ ನೆಚ್ಚಿನ ಪ್ರಧಾನ ಮಂತ್ರಿಯವರ 7 ವರ್ಷದ ಸಾಧನೆಯನ್ನು ಮಂಡಲದ ಪಬ್ಲಿಕ್ ಜಾಗದಲ್ಲಿ ಚಿತ್ರ ಪ್ರದರ್ಶನ ಓಪನ್ನಾಗಿ ಜನಗಳಿಗೆ ತಿಳಿಸುವಂತ ಕೆಲಸ ಮಾಡುವುದು ಯಾವುದಾದರು ಸರ್ಕಾರ ಎಂದರೆ ಅದು ಬಿಜೆಪಿ ಸರ್ಕಾರ ಮಾಡಿದಂತ ಒಳ್ಳೆಯ ಕೆಲ್ಸಗಳನ್ನ ಪಬ್ಲಿಕ್ ಜನರಿಗೆ ಬಿತ್ತರೆ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ, ವಿನಃ ಕಾರಣ ವಿರೋಧ ಪಕ್ಷದವ್ರು ಬಿಜೆಪಿಯವರು ಏನು ಮಾಡಿದ್ದಾರೆ ಅಂತ ಬೊಬ್ಬೆಯೊಡಿವ ಜನರು ಇಂದು ಇಡೀ ದಿನ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿ ಬಿಜೆಪಿ ಸಾಧನೆ ಬಗ್ಗೆ ತಿಳಿದುಕೊಂಡು ಹೋಗಲಿ ಎಂದರು …. ನಂತರ ಸಣ್ಣ ಕನಕಪ್ಪ ಮಾತನಾಡಿ ಕನಕಗಿರಿ ಮಂಡಲದಲ್ಲಿ ಕಾರ್ಯಕ್ರಮವನ್ನು ಬಹಳಷ್ಟು ಅಚ್ಚುಕಟ್ಟಾಗಿ ಮಾಡಿ ಜನರಿಗೆ ತಿಳಿಸುವಂತ ಕೆಲಸ ಮಾಡುತ್ತಿದೆ ನಮ್ಮ ಬಿಜೆಪಿ ಸರ್ಕಾರ, ಜಗತ್ತಿನಲ್ಲಿ ಸೂರ್ಯ ಮತ್ತು ಚಂದ್ರ ಎಷ್ಟೊಂದು ಅಜರಾಮರವಾಗಿ ನೆನಪಿನಲ್ಲಿ ಉಳಿದಿದ್ದಾರೋ (ಸೂರ್ಯ ಚಂದ್ರ ಇಲ್ಲದೆ ಜೀವನ ನೆಡೆಯೋದಿಲ್ಲವೋ )ಅದೇ ತರಹ ನೆಚ್ಚಿನ ದೇಶದ ಹೆಮ್ಮೆಯ ಭಾರತಾಂಬೆಯ ಪುತ್ರ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರು ಇಡೀ ಜಗತ್ತಿನ ಜನರ ಮನಸಿನಲ್ಲಿ ಉಳಿಯಲಿದ್ದಾರೆ (ಮೋದಿಜಿ ಇಲ್ಲದೆ ಮೋದಿಯವರ ಆಡಳಿತ ಇಲ್ಲದೆ ಜನರು ದಾರಿತಪ್ಪಿದಂತಾಗುತ್ತೆ )ಎಂದರು …….. ಈ ಸಂದರ್ಭದಲ್ಲಿ ಮುಖಂಡರಾದ ರಾಜಶರತ್ ಚಂದ್ರ ನಾಯಕ, ವಾಗೀಶ ಹಿರೇಮಠ, ರಂಗಪ್ಪ ಕೊರಗಟಗಿ, ಹನುಮಂತ್ ಬಸರಿಗಿಡದ, ಸುಭಾಸ್ ಕಂದಕೂರ, ಶ್ರೀಮತಿ ಅಶ್ವಿನಿ ಟಿ ದೇಸಾಯಿ,ಗ್ಯಾನಪ್ಪ ಗಾಣದಾಳ, ಅರುಣ್ ಭೂಸನೂರಮಠ, ಹುಸೇನ್ ಸಾಬ್, ಹನುಮೇಶ್ ವಾಲೇಕರ್, ತಿಪ್ಪಣ್ಣ ಮಡಿವಾಳ್, ನರಸಪ್ಪ ಕುರುಗೋಡು, ಸಣ್ಣ ದುರುಗಪ್ಪ, ಕಂಠಿ ಮ್ಯಾಗಡೆ, ವೆಂಕಟೇಶ್ ನಿರಲೂಟಿ, ಕ್ಷೆತ್ರದ ಸಾರ್ವಜನಿಕರು ಹಾಗೂ ಹಿತೈಷಿಗಳು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

Discover more from Valmiki Mithra

Subscribe now to keep reading and get access to the full archive.

Continue reading