ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಅವರ ರಸ್ತೆ ಅಪಘಾತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಂತ್ ಅವರ ತಾಯಿಯೊಂದಿಗೆ ಮಾತನಾಡಿದ್ದಾರೆ.
ಅವರು ಪಂತ್ ಅವರ ಸ್ಥಿತಿಯ ಬಗ್ಗೆ ತಾಯಿಯನ್ನು ಕೇಳಿದ್ದಾರೆ ಮತ್ತು ಪಂತ್ ಅವರ ತಾಯಿಗೆ ಧೈರ್ಯದ ಮಾತುಗಳನ್ನು ಆಡಿದ್ದಾರೆ ಎಂದು ತಿಳಿದುಬಂದಿದೆ.
ಹಿಂದಿನ ದಿನ, ರಿಷಭ್ ಪಂತ್ ಅವರ ಅಪಘಾತದ ಬಗ್ಗೆ ಪ್ರಧಾನಿ ದುಃಖ ವ್ಯಕ್ತಪಡಿಸಿದ್ದರು. ರಿಷಭ್ ಪಂತ್ ಅವರ ಕಾರು ಅಪಘಾತದಿಂದ ಮನನೊಂದ ಅವರು ಟ್ವೀಟ್ ಮಾಡಿದ್ದರು. ಅವರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಮೋದಿ ಟ್ವೀಟ್ ಮೂಲಕ ತಿಳಿಸಿದ್ದರು. ಅಲ್ಲದೇ ನಿನ್ನೆಯೇ ಮೋದಿ ಅವರ ತಾಯಿಯೂ ಸಹ ನಿಧನರಾಗಿದ್ದರು.