ಜಾರ್ಖಂಡ್: ಮೂಲದ ನಟಿ ರಿಯಾ ಕುಮಾರಿ ಮೇಲೆ ಗುಂಡಿನ ದಾಳಿ ನಡೆದಿದೆ. ಸ್ಥಳದಲ್ಲಿಯೇ ನಟಿ ರಿಯಾ ಸಾವನ್ನಪ್ಪಿದ್ದಾರೆ.
ನಟಿ ರಿಯಾ ಹಾಗೂ ಅವರ ಪತಿ ಪ್ರಕಾಶ್ ಕುಮಾರ್ ಅವರು ಕೋಲ್ಕತಾದಿಂದ ರಾಂಚಿಗೆ ಪ್ರಯಾಣಿಸುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದುಷ್ಕರ್ಮಿಗಳು ಅವರ ಮೇಲೆ ಅಟ್ಯಾಕ್ ಮಾಡಿದ್ದಾರೆ.ದುಷ್ಕರ್ಮಿಗಳು ಶಸ್ತ್ರಾಸ್ತ್ರಗಳೊಂದಿಗೆ ದರೋಡೆ ಮಾಡುವ ಸಂದರ್ಭದಲ್ಲಿ ರಿಯಾ ಪತಿ ಪ್ರಕಾಶ್ ಕುಮಾರ್ ಅವರು ದರೋಡೆಕೋರರನ್ನು ನೂಕಿದ್ದಾರೆ.
ಅದೇ ಸಂದರ್ಭದಲ್ಲಿ ನಟಿ ರಿಯಾ ಮೇಲೆ ಮತ್ತೊಬ್ಬ ವ್ಯಕ್ತಿ ಗನ್ ಪಾಯಿಂಟ್ ಮಾಡಿ ಗುಂಡಿಕ್ಕಿದ್ದ.ಗುಂಡಿನ ದಾಳಿಗೆ ನಟಿ ರಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಘಟನೆ ನಡೆದ ತಕ್ಷಣವೇ ದುಷ್ಕರ್ಮಿಗಳು ಅಲ್ಲಿಂದ ಓಡಿ ಹೋದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ನಟಿ ರಿಯಾ ಪತಿ ಪ್ರಕಾಶ್ ಕುಮಾರ್ ಹಾಗೂ ಸ್ಥಳೀಯರ ಹೇಳಿಕೆಯನ್ನು ಪಡೆದು ಮುಂದಿನ ಕ್ರಮಕೈಗೊಂಡರು.