ಕೋಲಾರ: ಸಿದ್ದರಾಮಯ್ಯ ಆವರನ್ನು ಕೋಲಾರದಲ್ಲಿ ಗೆಲ್ಲಿಸುವ ಶಕ್ತಿ ರಮೇಶ್ ಕುಮಾರ್ ರವರಿಗೆ ಇದ್ದರೆ, ಸಿದ್ದರಾಮಯ್ಯ ಕೋಲಾರಕ್ಕೆ ಬಂದಾಗ ಸ್ಥಳೀಯರನ್ನು ಯಾವುದೇ ದುಡ್ಡು ಕೊಡದೆ ಐದು ಸಾವಿರ ಜನರನ್ನು ಸೇರಿಸಲಿ ಎಂದು ಕೋಲಾರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಸವಾಲು ಎಸೆದಿದ್ದಾರೆ
ಇತ್ತೀಚಿಗೆ ಸಿದ್ದರಾಮಯ್ಯ ಕೋಲಾರದಲ್ಲಿ ಚುಣಾವಣೆಗೆ ನಿಂತರೆ ವರ್ತೂರು ಪ್ರಕಾಶ್ ಅಡ್ರೆಸ್ ಇಲ್ಲಿದೆ ಹೋಗ್ತಾರೆ ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತಿಗೆ ಕೋಲಾರ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವರ್ತೂರು ಪ್ರಕಾಶ್, ರಮೇಶ್ ಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಜನವರಿ 9 ರಂದು ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರನ್ನು ಎರಡನೇ ಬಾರಿಗೆ ಘಟಬಂಧನ್ ನಾಯಕರು ಕರೆತರುತ್ತಿದ್ದಾರೆ. ಅದಕ್ಕೂ ಮುಂಚೆ ಅಲ್ಪಸಂಖ್ಯಾತರನ್ನು ಹೊರತು ಪಡಿಸಿ 5 ಸಾವಿರ ಕಾರ್ಯಕರ್ತರನ್ನು ಸೇರಿಸಿ ಘಟಬಂಧನ್ ನಾಯಕರು ಕೋಲಾರದಲ್ಲಿ ಒಂದು ಸಮಾವೇಶ ಮಾಡಿ ತೋರಿಸಲಿ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರಿಗೆ ಆರ್.ವರ್ತೂರು ಪ್ರಕಾಶ್ ಸವಾಲು ಹಾಕಿದರು.