ಬೆಂಗಳೂರು: ಯಶಸ್ವಿನಿ ಯೋಜನೆಯಡಿ ಸಹಕಾರ ಸಂಘಗಳ 30 ಲಕ್ಷ ಸದಸ್ಯರನ್ನು ನೋಂದಾವಣಿ ಮಾಡುವ ಗುರಿ ಇದೆ. ಗುರಿ ತಲುಪದೇ ಇದ್ದಲ್ಲಿ ನೋಂದಣಿ ಅಧಿವಯನ್ನು ವಿಸ್ತರಣೆ ಮಾಡುವ ಕುರಿತು ಪರಿಶೀಲನೆ ನಡೆಸುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಸಿ.ಎನ್.ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿ, ಯಶಸ್ವಿನಿ ಯೋಜನೆಯ ನೋಂದಣಿ ಅವಧಿಯನ್ನು ವಿಸ್ತರಣೆ ಮಾಡಿ, ಎಸ್‍ಸಿ ಮತ್ತು ಎಸ್‍ಟಿ ಸಮುದಾಯಕ್ಕೆ ನೋಂದಣಿ ಶುಲ್ಕ ವಿನಾಯಿತಿ ನೀಡಿರುಂತೆ, ಮಾಜಿ ಸೈನಿಕರಿಗೂ ವಿನಾಯಿತಿ ನೀಡಿ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗ್ರಾಮೀಣ ಭಾಗದಲ್ಲಿ ರೈತರು ಒಂದಲ್ಲ ಒಂದು ಸಹಕಾರ ಸಂಘದಲ್ಲಿ ಸದಸ್ಯರಾಗಿರುತ್ತಾರೆ. 30 ಸಾವಿರಕ್ಕಿಂತ ಹೆಚ್ಚಿನ ವೇತನ ಪಡೆಯುವವ ನೌಕರರಿದ್ದರೆ ಅನ್ವಯವಾಗುತ್ತಿರಲಿಲ್ಲ. ನಿಯಮ ತಿದ್ದುಪಡಿ ಮಾಡಿ ಸರಿ ಪಡಿಸಲಾಗುಗಿದೆ.