ಅನುಶ್ರೀ ಹಾಗೂ ಡಾಲಿ ಧನಂಜಯ್ ಇಬ್ಬರು ಇದ್ದ ವೇದಿಕೆಯಲ್ಲಿ ಮದುವೆ ಪ್ರಶ್ನೆ ಪ್ರಸ್ತಾಪಿಸಲಾಗಿದೆ.ಈ ವೇಳೆ ಧನಂಜಯ್ ಅವರು ಮದುವೆ ವಿಚಾರದಲ್ಲಿ ಹೊಸ ಘೋಷಣೆ ಮಾಡಿದರು. ಇದನ್ನು ಕೇಳಿ ಅಭಿಮಾನಿಗಳು ನಕ್ಕಿದ್ದಾರೆ.
ಡಾಲಿ ಧನಂಜಯ್ ಮದುವೆ ಆಗಬೇಕಾ? ಎಂದು ಫ್ಯಾನ್ಸ್ ಬಳಿ ಪ್ರಶ್ನೆ ಮಾಡಿದರು. ಬಳಿಕ ಫ್ಯಾನ್ಸ್ ಬೇಡ ಎನ್ನುತ್ತಿದ್ದಾರೆ ಎಂದು ಧನಂಜಯ್ ಉತ್ತರಿಸಿದರು.ಅನುಶ್ರೀ ಮದುವೆ ಅನೌನ್ಸ್ ಬೆನ್ನಲ್ಲೇ ನಾನು ಮದುವೆ ಆಗುತ್ತೇನೆ ಎಂದು ಧನಂಜಯ್ ಹೇಳಿದ್ದಾರೆ.
ಈ ವೇಳೆ ಅನುಶ್ರೀ ಅದಕ್ಕೆ ನೀವು ತುಂಬಾ ಸಮಯ ಕಾಯಬೇಕಾಗುತ್ತದೆ ಎಂದಿದ್ದಾರೆ. ಫ್ಯಾನ್ಸ್ ಇಬ್ಬರ ಮಾತು ಕೇಳಿ ನಕ್ಕು ಸುಮ್ಮನಾದ್ರು.
ಧನಂಜಯ್ ಹಾಗೂ ಅದಿತಿ ಪ್ರಭುದೇವ ನಟನೆಯ ‘ಒನ್ಸ್ ಅಪಾನ ಟೈಮ್ ಇನ್ ಜಮಾಲಿ ಗುಡ್ಡ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ.