ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಕಾರಣಕ್ಕೆ ಎರಡು ವರ್ಷಗಳು ಹೋಟೆಲ್‌ಗಳು ಬಾಗಿಲು ಮುಚ್ಚಿದ್ದವು. ಹಲವು ಕಾರ್ಮಿಕರು ಕೆಲಸ ಕಳೆದುಕೊಂಡು ಊರು ಬಿಟ್ಟು ಹೋಗುವಂತಾಯಿತು.
ಮತ್ತೆ ಹೋಟೆಲ್ ಬಂದ್ ಮಾಡಿದ್ದಾರೆ ಬಹಳಷ್ಟು ನಷ್ಟ ಸಂಭವಿಸಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಹೋಟೆಲ್ ಬಂದ್ ಎಂಬ ಅವೈಜ್ಞಾನಿಕ ರೂಲ್ಸ್ ಜಾರಿ ಮಾಡದಂತೆ ಮನವಿ ಮಾಡಿದ್ದಾರೆ.
ಮಾರ್ಷಲ್ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಜತೆಗೆ ಎಲ್ಲ ಕೋವಿಡ್ ನಿಯಮಗಳನ್ನು ಪಾಲಿಸಲು ಸಜ್ಜಾಗಿದ್ದೇವೆ ಎಂದರು. ಅದರೆ, ಯಾವ ಕಾರಣಕ್ಕೂ ಹೋಟೆಲ್ ಮುಚ್ಚುವ ಆದೇಶ ಹೊರಡಿಸಬಾರದು ಎಂದು ಕೇಳಿಕೊಂಡಿದ್ದಾರೆ.
ಕಳೆದ ಭಾರೀ ಕೊರೊನಾ ಸಮಯದಲ್ಲಿ ಸೀಮಿತ ಸಮಯದಲ್ಲಿ ಮಾತ್ರ ಪಾರ್ಸಲ್‌ಗಷ್ಟೆ ಅವಕಾಶ ಕಲ್ಪಿಸಿಕೊಡಲಾಗಿತು. ಆದರಿಂದ ಬಹಳಷ್ಟು ಜನ ಊರು ಬಿಡುವ ಪರಿಸ್ಥಿತಿ ಎದುರಾಗಿದೆ. ಮತ್ತೆ ಈಗ ಕೊರೊನಾ ಅಲೆ ಬಿಸುತ್ತಿದು ಹೋಟೆಲ್ ಉದ್ಯಮ ಮತ್ತೆ ಸಂಕಷ್ಟದ ಭೀತಿಯಲಿದ್ದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.