ಬೆಳಗಾವಿ: ಸಾವರ್ಕರ್ ಫೋಟೋಗೆ ನಮ್ಮ ಆಕ್ಷೇಪವಿಲ್ಲ ಆದರೆ ಅವರ ಫೋಟೋದ ಜೊತೆ ಇತರ ಮಹನೀಯರ ಫೋಟೋಗಳನ್ನು ಸಭಾಂಗಣದಲ್ಲಿ ಅಳವಡಿಸಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಹಾಲ್‍ನಲ್ಲಿ ಫೋಟೋ ಇಡಲು ಸಭಾಧ್ಯಕ್ಷರು ಅಸೆಂಬ್ಲಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಚರ್ಚೆ ಮಾಡದೆ ಏಕಾಏಕಿ ಭಾವಾಚಿತ್ರ ಅಳವಡಿಕೆ ಮಾಡಿದ್ದಾರೆ ಎಂದು ಅಸಮಧಾನ ವ್ಯಕ್ತಪಿಸಿದರು.
ಭಾವಾಚಿತ್ರ ಅನಾವರಣ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ಇರಲಿಲ್ಲ, ಮಾಧ್ಯಮದ ಮೂಲಕ ತಿಳಿದುಕೊಂಡೆ. ಯಾರದೇ ಫೋಟೋ ಇಡಲು ವಿರೋಧವಿಲ್ಲ. ಆದರೆ ಚರ್ಚೆ ಆಗದೆ ಇಟ್ಟಿರುವುದಕ್ಕೆ ನಮ್ಮ ವಿರೋಧವಿದೆ ಎಂದರು.