ಹುಬ್ಬಳ್ಳಿ: ಕುಕ್ಕರ್ ಬ್ಲಾಸ್ಟ್ ವಿಚಾರದಲ್ಲಿ ನನ್ನ ಬಗ್ಗೆ ಯಾರು ಬೇಕಾದ್ರೂ, ಏನಾದ್ರು ಪ್ರಚಾರ ಮಾಡ್ಲಿ. ನಮ್ಮದು ಕಾಂಗ್ರೆಸ್ ಪಕ್ಷ, ಭಯೋತ್ಪಾದನೆಯನ್ನು ವಿರೋಧಿಸುತ್ತಾ ಬಂದಿರುವ ಪಕ್ಷ. ಅಧಿಕಾರದಲ್ಲಿ ಇದ್ದಾಗೆಲ್ಲಾ ದೇಶದಲ್ಲಿ ಭಯೋತ್ಪಾದನೆ ದಮನ ಮಾಡಿದ್ದೇವೆ. ಭಯೋತ್ಪಾದನೆ ನಿಯಂತ್ರಿಸಲಾಗದ ಸರ್ಕಾರವನ್ನೇ ವಜಾ ಮಾಡಿದ್ದೇವೆ ಎಂದು ಡಿಕೆಶಿ ಹೇಳಿದ್ದಾರೆ.
ಮಂಗಳೂರು ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದೀವಿ. ಯುವಕನಿಗೆ ಪ್ರಜ್ಞೆ ಬರೋವರೆಗೆ ಏನೂ ಹೇಳಲು ಆಗಲ್ಲ ಅಂತ ಪೊಲೀಸ್ ಕಮೀಷನರ್ ಹೇಳಿದ್ರು. ಮಂಗಳೂರು ಪೊಲೀಸರು ಹಿನ್ನೆಲೆ ತಿಳ್ಕೊಬೇಕು ಅಂತ ಮೊದಲು ಹೇಳಿಕೆ ಕೊಟ್ರು. ಆದರೆ ಡಿಜಿಪಿ ಘಟನೆಗೆ ಭಯೋತ್ಪಾದನೆಯ ಲೇಪ ಕೊಟ್ರು. ಬಿಜೆಪಿಯ ಭ್ರಷ್ಟಾಚಾರ, ಮತಗಳ್ಳತನ, ಬೋಗಸ್ ವೋಟರ್ ಸೃಷ್ಟಿನ್ನು ಮುಚ್ಚುವ ಯತ್ನವಿದು ಎಂದು ಮತ್ತೆ ಡಿಕೆಶಿ ಆರೋಪಿಸಿದ್ದಾರೆ.
ಬಿಜೆಪಿ ಭ್ರಷ್ಟಾಚಾರ ಮುಚ್ಚಿಕೊಳ್ಳಲಿಕ್ಕೆ ಕುಕ್ಕರ್ ಬ್ಲಾಸ್ಟ್ ಪ್ರಕರಣ ಮುಂದೆ ತಂದಿದ್ದಾರೆ. ಹೋಮ್ ಮಿನಿಸ್ಟರ್ ವಿಷಯವನ್ನು ರಾಜಕೀಕರಣ ಮಾಡುತ್ತಿದ್ದಾರೆ ಎಂದು ಕುಕ್ಕರ್ ಬ್ಲಾಸ್ಟ್ ಹೇಳಿಕೆಯನ್ನು ಡಿಕೆಶಿ ಸಮರ್ಥಿಸಿಕೊಂಡರು. ಕಂದಾಯ ಸಚಿವ ಆರ್. ಅಶೋಕ್ ನನಗೆ ಅಮಾಯಕನ ಅವಾರ್ಡ್ ಕೊಡುವುದಾಗಿ ಹೇಳಿದ್ದಾರೆ. ಅಮಾಯಕರ ಅವಾರ್ಡ್ ತೆಗೆದುಕೊಳ್ಳಲು ನಾನು ಸಿದ್ದನಿದ್ದೇನೆ. ಅಶೋಕ್ ಡೇಟ್, ಟೈಮ್ ಫಿಕ್ಸ್ ಮಾಡಲಿ ಎಂದು ಡಿಕೆಶಿ ಸವಾಲು ಹಾಕಿದರು