ರಾಜ್ಯದಲ್ಲಿ ಐದು ವರ್ಷದ ಬಾಲಕಿ ಯಲ್ಲಿ ಝೀಕಾ ವೈರಸ್ ಕಾಣಿಸಿಕೊಂಡಿದ್ದು. ಈಗಾಗಲೇ ಬಾಲಕಿಗೆ ಚಿಕಿತ್ಸೆ ನೀಡಲಾಗಿದ್ದು, ಗುಣಮುಖಳಾಗ್ತಾ ಇದ್ದಾಳೆ. ಆದರೆ ಈ ಝೀಕಾ ವೈರಸ್ ಹೇಗೆ ಹರಡುತ್ತೆ ಅಂದರೆ, ಇದು ಸೊಳ್ಳೆಯಿಂದ ಹರಡುವ ರೋಗವಾಗಿದೆ.
ಈಡೀಸ್ ಎಂಬ ಸೊಳ್ಳೆಯಿಂದು ಈ ಸೋಂಕು ಬರುತ್ತದೆ. ಇನ್ನು ಇದರ ಗುಣಲಕ್ಷಣಗಳು ಅಂದರೆ, ಕೀಲು ನೋವು, ತಲೆ ನೋವು, ಜ್ವರ, ವಾಂತಿ. ಇನ್ನು ಗರ್ಭಿಣಿಯರಿಗೆ ಈ ಸೋಂಕು ತಗುಲಿದರೆ ಅಪಾಯ ಹೆಚ್ಚಿದೆ.
ಈ ರೋಗ ಲಕ್ಷಣ ಕಾಣಿಸಿಕೊಂಡವರು ಕೂಡಲೇ ವೈದ್ಯರ ಸಂಪರ್ಕ ಮಾಡಿ. ಹಾಗೂ ಚೆನ್ನಾಗಿ ವಿಶ್ರಾಂತಿ ಪಡೆಯಬೇಕಾಗಿದೆ. ದ್ರವ ರೂಪದ ಆಹಾರ ಹೆಚ್ಚಾಗಿ ತೆಗೆದುಕೊಳ್ಳಬೇಕಿದೆ.
ವೈದ್ಯರು ಹೇಳುವ ಔಷಧ ಪಾಲಿಸಿದರೆ ಸಾಕು. ಹೆದರುವಂತಹದ್ದು ಏನೂ ಇಲ್ಲ. ಸರಿಯಾದ ಸಮಯಕ್ಕೆ ವೈದ್ಯರನ್ನು ಕಾಣಬೇಕು. ಇನ್ನು ಈ ಸೋಂಕು ಕಂಡು ಬಂದ ಬೆನ್ನಲ್ಲೇ ಎಲ್ಲಾ ಕಡೆ ಮುನ್ನೆಚ್ಚರಿಕೆ ವಹಿಸಿ.