ತುಮಕೂರು: ಗುಬ್ಬಿಯಲ್ಲಿ ವಾಸಣ್ಣ ಅಭಿಮಾನಿ ಕುರುಬರ ಸಮಾಜದಿಂದ ವಾಸಣ್ಣ ಅಭಿಮಾನಿ ಯತೀಶ್ ಅವರ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷಾ ಯತೀಶ್ ಮಾತನಾಡಿ ಚುನಾವಣೆ ಬಂದಾಗ ಕಾಣಿಸಿಕೊಳ್ಳುವ ಕಾಂಗ್ರೆಸ್ ಮುಖಂಡ ಪ್ರಸನ್ನ ಕುಮಾರ್ ಉಳಿದ ದಿನಗಳಲ್ಲಿ ಎಲ್ಲಿ ಹೋಗಿರುತ್ತಾರೆ? ಅಭಿವೃದ್ಧಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿರುವ ಶಾಸಕ ಶ್ರೀನಿವಾಸ ಮೇಲೆ ಬೇಕಾಬಿಟ್ಟಿಯಾಗಿ ಮಾತನಾಡುವುದು ನಿಲ್ಲಿಸಿ ತಾಕತ್ತಿದ್ದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿ ಎಂದು ಸವಾಲ್ ಹಾಕಿದರು.
ಈ ಬಾರಿ ನಮ್ಮ ಶಾಸಕರನ್ನು ಕಾಂಗ್ರೆಸ್ ಗೆ ಕರೆತಂದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶವಾಗಿದೆ ಈಗಾಗಲೇ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯನವರು ಅವರೇ ಬರಬೇಕೆಂದು ನಿಶ್ಚಯಿಸಿರುವಾಗ ನೀವು ವಿರೋಧಿಸುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದರು.