ಬಳ್ಳಾರಿ: ಬಿಜೆಪಿಯ ಎಸ್‌ಟಿ ಸಮಾವೇಶದ ಯಶಸ್ವಿಯಾದ ಹಿನ್ನೆಲೆ ಪಕ್ಷದ ಪ್ರಬಂಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್‌ಟಿ ಸಮಾವೇಶದಲ್ಲಿ ಸಮಾಜದ ಒಗ್ಗಟಿನ ಪ್ರದರ್ಶನ ಮಾಡಿದ್ದೇವೆ. ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರದು ಸ್ವಾರ್ಥದ ಪಾದಯಾತ್ರೆ. ಆದರೆ, ಬಿಜೆಪಿ ಸಮಾಜದ ಹಿತಕ್ಕೆ ಸಮಾವೇಶ ಮಾಡಿದೆ ಎಂದು ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.
ಪುಂಗಿ ಮತ್ತು ಡೊಂಗಿ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ. ಎಸ್‌ಟಿ, ಎಸ್‌ಸಿ ಮೀಸಲಾತಿ ಪ್ರಮಾಣವನ್ನು ಕಾಂಗ್ರೆಸ್ ಏಕೆ ಹೆಚ್ಚಿಸಲಿಲ್ಲ. ಮೀಸಲಾತಿಯನ್ನು ಬಿಜೆಪಿ ಮಾತ್ರ ಹೆಚ್ಚಿಸಿದೆ. ನಾನು ಸಾಮಾನ್ಯ ವ್ಯಕ್ತಿ, ನಿಮ್ಮಿಂದಲೇ ನಾನು, ನನಗೆ ಸ್ಥಾನಮಾನ ಏನು ಇಲ್ಲ. ಪ್ರಬಂಧಕರು, ಪಕ್ಷದ ಕಾರ್ಯಕರ್ತರು, ಮುಖಂಡರೇ ಸಮಾವೇಶದ ಯಶಸ್ವಿಗೆ ಕಾರಣ ಎಂದರು.
ಗುಜರಾತಿನಲ್ಲಿ ಗುರುವಾರ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್‌ಗೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಕಾಂಗ್ರೆಸ್ ಮೂರು ರಾಜ್ಯದಲ್ಲಿ ಅಧಿಕಾರದಲ್ಲಿದ್ದು ಅಲ್ಲಿಯೂ ನೆಲಕಚ್ಚಲಿದೆ. ಎಸ್‌ಸಿ ಮತ್ತು ಎಸ್‌ಟಿ ಸಮಾಜದವರು ಬಿಜೆಪಿ ಪರವಾಗಿ ನಿಲ್ಲುತ್ತಾರೆ ಎಂದು ಹೇಳಿದರು.