ದೆಹಲಿ: ಪ್ರಧಾನಿ ಮೋದಿಯವರು ಇಂದು ಭಯೋತ್ಪಾದನೆ ನಿಗ್ರಹ ಹಣಕಾಸು ಕುರಿತು ಮೂರನೇ ‘ನೋ ಮನಿ ಫಾರ್ ಟೆರರ್’ ಸಚಿವರ ಸಮ್ಮೇಳನ ಉದ್ಘಾಟನಾ ಭಾಷಣ ಮಾಡಿದರು.
ದೆಹಲಿಯ ಹೋಟೆಲ್ ತಾಜ್ ಪ್ಯಾಲೇಸ್ ನಲ್ಲಿ ಸಭೆ ನಡೆಯುತ್ತಿದ್ದು, 2 ದಿನದ ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ದೇಶಗಳು ಭಾಗವಹಿಸುವ ಸಾಧ್ಯತೆಯಿದೆ.
ಬಹುಪಕ್ಷೀಯ ಸಂಸ್ಥೆಗಳ ಮುಖ್ಯಸ್ಥರು ಮತ್ತು ಫೈನಾನ್ಸ್ಇಯಲ್ ಆಕ್ಷನ್ ಟಾಸ್ಕ್ ಫೋರ್ಸ್ ನಿಯೋಗಗಳ ಮುಖ್ಯಸ್ಥರು ಸೇರಿದಂತೆ ಪ್ರಪಂಚದಾದ್ಯಂತ ಸುಮಾರು 450 ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಾವಿರಾರು ಅಮೂಲ್ಯವಾದ ಜೀವಗಳನ್ನು ನಾವು ಕಳೆದುಕೊಂಡಿದ್ದೇವೆ. ಭಯೋತ್ಪಾದನೆಯು ಇಡೀ ಮಾನವೀಯತೆಯ ಮೇಲೆ ಪರಿಣಾಮ ಬೀರಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದು ಎಲ್ಲ ಕ್ಷೇತ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀಳುತ್ತದೆ ಹಾಗಾಗಿ ಭಯೋತ್ಪಾದನೆಗೆ ನೀಡುವ ಹಣಕಾಸು ನೆರವಿಗೆ ತಡೆಯೊಡ್ಡಬೇಕು. ಹಣಕಾಸು ನೀಡುವವರ ಮೇಲೆ ಕ್ರಮ ತೆಗೆದುಕೊಳ್ಳಬೆಕು ಎಂದರು.