ಆರ್ಎಸ್ಎಸ್ ಸಿದ್ಧಾಂತ, ದೇಶಭಕ್ತಿಯಿಂದಾಗಿ ನಾನು ಹೆಮ್ಮೆಯಿಂದ ನನ್ನನ್ನು ಆರ್ಎಸ್ಎಸ್ ಜೊತೆಗೆ ಜೋಡಿಸಿಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು .
ಇದರಲ್ಲಿ ಅನುಮಾನವಿಲ್ಲ. ನಾವು ಒಂದು ದೊಡ್ಡ ದೇಶ ಭಕ್ತಿ ಸಂಸ್ಥೆಯೊಂದಿಗೆ ಕೈ ಜೋಡಿಸಿಕೊಂಡಿದ್ದೇವೆ ಎಂದಿದ್ದಾರೆ.
ಇನ್ನು ಹಿಂದುಳಿದ ವರ್ಗಗಳಲ್ಲೇ ಅತಿ ಹಿಂದುಳಿದ ವರ್ಗಗಳಿವೆ. ಅವುಗಳನ್ನು ನಾವು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಸೇರಿಸಿದ್ದಾಗ ಅವರಿಗೆ ನ್ಯಾಯ ಸಿಕ್ಕಿರಲಿಲ್ಲ. ಅದಕ್ಕಾಗಿ ಪ್ರತ್ಯೇಕ ಅನುದಾನವನ್ನು ಬಜೆಟ್ ನಲ್ಲಿ ಇಟ್ಟಿದ್ದೇವೆ.
ಇವತ್ತು ಆ ಬಜೆಟ್ನ ವಿಶೇಷ ಯೋಜನೆಗಳನ್ನು ಹೇಳಿದ್ದೇನೆ. ಎಜ್ಯೂಕೇಷನ್, ಎಂಪ್ಲಾಯ್ಮೆಂಟ್, ಎಂಪವರ್ಮೆಂಟ್ ಈ ಮೂರಕ್ಕೂ ಒತ್ತುಕೊಟ್ಟು ಯೋಜನೆ ಮಾಡುತ್ತಿದ್ದೇವೆ ಎಂದಿದ್ದಾರೆ.