ತುಮಕೂರು: ಸಿಎಂ ಹೇಳಿದರೆ ರಾಜೀನಾಮೆ ಕೊಡುತ್ತೇನೆ. ಆದರೆ ನಾನು ನಮ್ಮ ಸಹೋದ್ಯೋಗಿಗಳಿಗೆ ನಾನು ರಾಜೀನಾಮೆ ನೀಡಬೇಕಾಗಿಲ್ಲ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಸಿಎಂ ನಿಮ್ಮಿಂದ ನಮ್ಮ ಸರ್ಕಾರಕ್ಕೆ ಅಪಚಾರ ಆಗಿದೆ ರಾಜೀನಾಮೆ ಕೊಡಿ ಎಂದರೆ ಎರಡು ಮಾತನಾಡದೇ ಕೊಡುತ್ತೇನೆ ಎಂದರು. ಇನ್ನು ಈ ವಿಚಾರ ಮಾತನಾಡುವಾಗ ಕೆಲ ಸಚಿವರಿಗೆ ಸೌಜನ್ಯ ಇರಬೇಕಿತ್ತು. ಮೊದಲು ನನ್ನ ಜೊತೆ ಅಥವಾ ಸಿಎಂ ಜೊತೆ ಮಾತನಾಡಬೇಕಿತ್ತು ಎಂದರು.
ನಾನು ಯಾರನ್ನೂ ಶತ್ರುಗಳು ಎಂದುಕೊಳ್ಳಲ್ಲ. ನಾನು ಈಗಲೂ ನನ್ನ ಸಂಪುಟದ ಸಹೋದ್ಯೋಗಿಗಳ ಜೊತೆ ನಿಲ್ಲುತ್ತೇನೆ. ಸಂಪುಟದ ಸಹೋದ್ಯೋಗಿಗಳು ಬಹಿರಂಗವಾಗಿ ಮಾತನಾಡಬಾರದು. ಪಕ್ಷದಿಂದ ನನಗೆ ಯಾವುದೇ ಆಕ್ಷೇಪಣೆ ಬಂದಿಲ್ಲ ಎಂದು ನುಡಿದರು.