ಬೆಂಗಳೂರಿನಲ್ಲಿ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ಡಾ. ಸಿ.ಎನ್. ಮಂಜುನಾಥ್

ಮೈಸೂರು: ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಮೆಡ್ಟ್ರಾನಿಕ್ಸ್, ಅಮೆರಿಕಾ ಹಾಗೂ ಡಾ. ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಷನ್, ವಿಸ್ಕಿನ್ ಸನ್, ಅಮೇರಿಕಾರವರ ಸಹಯೋಗದೊಂದಿಗೆ 150 ರೋಗಿಗಳಿಗೆ ಆಂಜಿಯೋಪ್ಲಾಸ್ಟಿ ಕಾರ್ಯಾಗಾರವನ್ನು ಜೂ.24 ರಿಂದ 26ರವರೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ.

ಸಿ.ಎನ್. ಮಂಜುನಾಥ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಕಾರ್ಯಾಗಾರವನ್ನು 150 ಜನ ಬಡರೋಗಿಗಳು ಹಾಗೂ ಬಡತನದ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರಿಗಾಗಿ ಆಯೋಜಿಸಲಾಗಿದೆ.

ಪ್ರತಿ ರೋಗಿಗೂ ಉನ್ನತ ಮಟ್ಟದ ಮೆಡಿಕೇಟೆಡ್ ಸ್ಟಂಟ್ಗಳನ್ನು ಉಚಿತವಾಗಿ ಅಳವಡಿಸಲಾಗುವುದು. ಈ ಸೌಲಭ್ಯವನ್ನು ಈಗಾಗಲೇ ಆಂಜಿಯೋಗ್ರಾಮ್ ತಪಾಸಣೆಗೆ ಒಳಪಟ್ಟಿರುವ ರೋಗಿಗಳು ಪಡೆಯಬಹುದು.

ಅವಶ್ಯಕವಿರುವ ರೋಗಿಗಳು ದಾಖಲಾತಿ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಅಥವಾ ಕಡಿಮೆ ಆದಾಯ ಪ್ರಮಾಣಪತ್ರವನ್ನು ಹೊಂದಿರಬೇಕು ಎಂದು ತಿಳಿಸಿದ ಅವರು ತಮ್ಮ ಹೆಸರನ್ನು ೨೦ನೇ ಜೂನ್ ಒಳಗಾಗಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ರವರೆಗೆ ನಿರ್ದೇಶಕರ ಕಛೇರಿ, ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬನ್ನೇರುಘಟ್ಟ ರಸ್ತೆ, ಜಯನಗರ 9ನೇ ಬ್ಲಾಕ್, ಬೆಂಗಳೂರು ಇಲ್ಲಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ 9480827888 ಅಥವಾ 080-22977433 / 322 ನ್ನು ಸಂಪರ್ಕಿಸಬಹುದು.

Discover more from Valmiki Mithra

Subscribe now to keep reading and get access to the full archive.

Continue reading