ಬಂಟ್ವಾಳ : ತಾಲೂಕು ತಹಶೀಲ್ದಾರರಾಗಿದ್ದ ರಶ್ಮೀ ಎಸ್. ಆರ್ ರವರನ್ನು ಕಂದಾಯ ಇಲಾಖೆಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ವರ್ಗಾಯಿಸಲಾಗಿದೆ.
ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಅಕ್ಕಮಹಾದೇವಿ ಯವರು ಆದೇಶ ಹೊರಡಿಸಿದ್ದು, ಬಂಟ್ವಾಳ ದ ಗ್ರೇಡ್ 1 ತಹಶೀಲ್ದಾರರಾಗಿದ್ದ ರಶ್ಮಿ ಎಸ್.
ಆರ್ ಅವರನ್ನು ಮುಂದಿನ ಆದೇಶದ ವರೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಯಾಗಿ ನಿಯೋಜಿಸಿ ಆದೇಶಿಸಿದ್ದಾರೆ.
ಸದ್ರಿ ಹುದ್ದೆಯಲ್ಲಿದ್ದ ಸಚಿನ್ ಕುಮಾರ್ ಅವರನ್ನು ಹಿಂ.ವ. ಇಲಾಖೆಯ ಜಿಲ್ಲಾ ಅಧಿಕಾರಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದ್ದು, ಕರ್ತವ್ಯದ ಸ್ಥಳ ತೋರಿಸಿಲ್ಲ.