ಕಾರಟಗಿ:ಎ:18: ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್ ವತಿಯಿಂದ ಧಾರವಾಡದಲ್ಲಿ ವಿವಿಧ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಈಗ ಟ್ರಸ್ಟ್ ವತಿಯಿಂದ ವಿಕಲಚೇತನರಿಗೆ ದಿನಸಿ ಕಿಟ್ ವಿತರಿಸುತ್ತಿರುವ ಟ್ರಸ್ಟ್ ಗೆ ತಮ್ಮ ಸಹಕಾರ ಇರುವುದಾಗಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸರ್ದಾರ್ ಆಲಿ ಹೇಳಿದರು,
ಶನಿವಾರದಂದು ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಆಯ್ದ ವಿಕಲಚೇತನರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,
ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್ ನವರು ಹಮ್ಮಿಕೊಂಡಿರುವ ಸಾಮಾಜಿಕ ಕಾರ್ಯ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮಾದರಿಯಾಗಲಿ ಸಾಮಾಜಿಕ ಕಾರ್ಯಕ್ರಮ ಮುಖಾಂತರ ಇನ್ನು ಹೆಚ್ಚಿನ ಸೇವೆ ಮಾಡಿ ಮುಂದಿನ ದಿನಗಳಲ್ಲಿ ಇದೆ ಸ್ಥಳದಲ್ಲಿ ಉನ್ನತ ಕಾರ್ಯಕ್ರಮ ಮಾಡಲಿ ಎಂದು ಹಾರೈಸಿದರು,
ದಿವ್ಯ ಸಾನಿಧ್ಯವನ್ನು ತಲೇಖಾನ ಮಠದ ಶ್ರೀ ವೀರಭದ್ರಶ್ವರ ಶರಣರು ವಹಿಸಿದ್ದರು, ನಂತರ ಮಾತನಾಡಿದ ಶರಣರು ಗಾನಯೋಗಿ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರಂತೆ ವಿಕಲಚೇತನರನ್ನು ಗೌರವದಿಂದ ಕಾಣಿ ಅವರಿಗೆ ಗೌರವ ನೀಡಲು ತಿಳಿಸಿ ಟ್ರಸ್ಟ್ ಗೆ ಶುಭ ಹಾರೈಸಿದರು,
ಇದೆ ಸಂದರ್ಭದಲ್ಲಿ ವಿದ್ಯಾಭಾರತಿ ಮಹಿಳಾ ಮಹಾವಿದ್ಯಾಲಯ ಆಡಳಿತಧಿಕಾರಿ ವಿರೇಶ್ ಹಾಲಸಮುದ್ರ ಮಾತಾನಾಡಿ ತಮ್ಮ ಸಂಸ್ಥೆಯಿಂದ ವಿಕಲಚೇತನರಿಗೆ ಪಿಯುಸಿಯಿಂದ ಡಿಗ್ರೀವರೆಗೆ ಉಚಿತ ಶಿಕ್ಷಣ ನೀಡುವುದಾಗಿ ತಿಳಿಸಿದರು, ಈ ಸಂದರ್ಭದಲ್ಲಿ ಟ್ರಸ್ಟವತಿಯಿಂದ ಅವರನ್ನು ಸನ್ಮಾನಿಸಲಾಯಿತು,
ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷರು ಉಮೇಶ್ ಮರ್ಲಾನಹಳ್ಳಿ, ನೌಕರರ ಸಂಘದ ತಾಲೂಕು ಪ್ರ.ಕಾರ್ಯದರ್ಶಿ ತಿಮ್ಮಣ್ಣ ನಾಯಕ, ಟ್ರಸ್ಟ್ ನ ಪ್ರೇಮ ಅಮರೇಶ್, ನಿಂಗರಾಜ್ (ತೇಜು) ಮಾಂಬ್ಳೆಶ್ ದೊಡ್ಡಮನಿ ಗೌರಮ್ಮ ಯರಡೋಣ.ಪಕೀರಮ್ಮ ಕುರುಬರು.ಬಸಯ್ಯ ಸ್ವಾಮಿ. ರಜಿಯಾ ಬೇಗಂ.
ಬಸಮ್ಮ ಎಂ.ಬಿ.ನಗರ ರಾಜಾಸಾಬ್ ಮರ್ಲಾನಹಳ್ಳಿ.
ಶರಣಮ್ಮ ಇನ್ನಿತರ ವಿಕಲಚೇತನರು ಭಾಗವಹಿಸಿದ್ದರು