ಸೌದತ್ತಿ ತಾಲೂಕಿನ ಗೊರವನಹಳ್ಳಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು. ಪೂಜ್ಯ ಶ್ರೀ ಶಿವಾನಂದ ಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು ನೂತನ ವಧು-ವರರಿಗೆ ಪೂಜ್ಯ ಶ್ರೀಗಳು ಆಶೀರ್ವಚನ ನೀಡಿದರು, ಸುವರ್ಣಗಿರಿ ಬ್ರಹ್ಮಾನಂದ ಆಶ್ರಮದ ಶ್ರೀ ಸಿದ್ದಪ್ಪಾ ಸ್ವಾಮೀಜಿಯವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೌರಭ್ ಆನಂದ್ ಚೋಪ್ರಾ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಪ್ರಸನ್ನ ಕುಮಾರ್ ವಿ ಇನಮ್ದಾರ್ ಅವರು ಅತಿಥಿಗಳಾಗಿ ಆಗಮಿಸಿದ ಶ್ರೀ ರಾಘವೇಂದ್ರ ಪೂಜಾರಿ, ಪ್ರಕಾಶ್ ಇನಾಮ್ದಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಗೊರವನಕೊಳ್ಳ, ಗ್ರಾಮ ಪಂಚಾಯತಿ ಸದಸ್ಯರಾದ ಹೂವಪ್ಪ ಮುನವಳ್ಳಿ, ದ್ಯಾಮಣ್ಣ ಹಂಚ ಪನವರ್, ಸಲಿಮುಲ್ಲಾ ನದಾಫ್, ಸಮಾಜದ ಮುಖಂಡರಾದ ಪ್ರಕಾಶ್ ಮುನವಳ್ಳಿ, ಬಸವರಾಜ್ ಸಕ್ರಿ, ಮಲ್ಲಪ್ಪ ಮೇಟಿ, ಬಸವರಾಜ ಶಿರನ್ನವರ್, ಮತ್ತು ಊರಿನ ಗ್ರಾಮಸ್ಥರೊಂದಿಗೆ ನೂತನ ವಧು-ವರರಿಗೆ ಶುಭಕೋರಿದರು.