ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಶ್ರೀ ಪ್ರಸನ್ನಾನಂದ ವಾಲ್ಮೀಕಿ ಸ್ವಾಮಿಗಳಿಗೆ ಬಿಎಸ್ ಪಿ ಬೆಂಬಲ

ಬೆಂಗಳೂರು: ಶ್ರೀ ಪ್ರಸನ್ನ ನಂದ ವಾಲ್ಮೀಕಿ ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೊಳಿಸಲು ಒತ್ತಾಯಿಸಿ ಧರಣಿ ಸತ್ಯಾಗ್ರಹ 37 ನೇ ದಿನಕ್ಕೆ ಮುಂದುವರಿದಿದೆ.

ಬೆಂಗಳೂರು ಸ್ವಾತಂತ್ರ ಉದ್ಯಾನವನ ಆವರಣದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಕೊರಟಗೆರೆ ತಾಲೂಕು ಬಹುಜನ ಜನ ಸಮಾಜ ಪಾರ್ಟಿ ಕಾರ್ಯಕರ್ತರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ವಾಲ್ಮೀಕಿ ಶ್ರೀಗಳಿಗೆ ಬೆಂಬಲ ಸೂಚಿಸಿದರು.

ಈ ವೇಳೆ ಮಾತನಾಡಿದ ಬಹುಜನ ಸಮಾಜ ಪಕ್ಷದ ತಾಲ್ಲೂಕು ಅಧ್ಯಕ್ಷ ಅಭ್ಯರ್ಥಿ ಜೆಟ್ಟಿ ಅಗ್ರಹಾರ ನಾಗರಾಜ್, ಸರ್ಕಾರ ಕೂಡಲೇ ನಾಗಮೋಹನದಾಸ್ ಆಯೋಗದ ವರದಿಯನ್ನು ಜಾರಿ ಮಾಡಬೇಕು. ಸಂವಿಧಾನ, ರಾಮಾಯಣ ಬರೆದ ವಂಶ ನಮ್ಮದು. ನಾವಿಂದು ರಸ್ತೆಗಿಳಿದು ಹೋರಾಟ ಮಾಡುವ ಅನಿವಾರ್ಯ ಎದುರಾಗಿದೆ. ಶ್ರೀಗಳ ಧರಣಿ ಸತ್ಯಾಗ್ರಹ ಇಂದಿಗೆ 37ನೇ ದಿನಕ್ಕೆ ತಲುಪಿದೆ. ಸರ್ಕಾರದ ಮಂತ್ರಿಗಳಾಗಲಿ, ಮುಖ್ಯಮಂತ್ರಿಗಳಾಗಲಿ, ಸ್ಥಳಕ್ಕಾಗಮಿಸಿ ವರದಿ ಜಾರಿಗೊಳಿಸುವ ಭರವಸೆ ನೀಡಿಲ್ಲ. ಪ್ರತಿಭಟನೆ 37 ಸಂಖ್ಯೆ 336 ಆದರೂ ಸರಿಯೇ ಈ ಹೋರಾಟ ನಿರಂತರ ಇವರೊಂದಿಗೆ ಬಹುಜನ ಸಮಾಜ ಪಾರ್ಟಿ ಬೆಂಬಲ ಸದಾ ಇರುತ್ತದೆ. ಇಂದಿಗೂ ಅನುಸೂಚಿತ ಜಾತಿ ಅನುಸೂಚಿತ ವರ್ಗಗಳ ಸಂಪೂರ್ಣ ಮೀಸಲಾತಿ ಜಾರಿ ಮಾಡದೆ ಇರುವುದು ಖಂಡನೀಯ ಮುಂದಿನ ದಿನಗಳಲ್ಲಿ sc.st.obc ಗಳು ಜಾಗ್ರತೆಯಿಂದ ಮತ ನೀಡುವ ಅನಿವಾರ್ಯತೆ ನಮ್ಮ ಮುಂದಿದೆ ಸ್ವಾಮೀಜಿಗಳೊಂದಿಗೆ ನಿರಂತರ ಬಹುಜನ ಸಮಾಜ ಪಾರ್ಟಿ ನೀಡಲಾಗುತ್ತದೆ ಎಂದರು

ನಮ್ಮ ಭಾರತ ಕರ್ನಾಟಕದಲ್ಲಿ ಹುಟ್ಟಿದ ಮೂಲ ದ್ರಾವಿಡರಿಗೆ ನಾಯಕ ಜನಾಂಗಕ್ಕೆ 7.5 ಮಿಸಲಾತಿ ಕೂಡಲೇ ಜಾರಿ ಮಾಡಬೇಕು ಎಂದು ಇದೇ ವೇಳೆ ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಗಟ್ಟಹಳ್ಳಿ ಸುರೇಶ್ ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ ಶಿಲ್ಪಾ ನಾಗರಾಜು ಹೋಬಳಿ ಅಧ್ಯಕ್ಷ ಕೃಷ್ಣ ಅನಂತ ಮಾರುತಿ ನಗರ ಅಧ್ಯಕ್ಷ ಮಂಜುನಾಥ ಇನ್ನಿತರರು ಉಪಸ್ಥಿತರಿದ್ದರು

Discover more from Valmiki Mithra

Subscribe now to keep reading and get access to the full archive.

Continue reading