ಗುಡಿಬಂಡೆ: ತಾಲ್ಲೂಕಿನ ಅಭಿವೃದ್ಧಿ ಕಾಮಗಾರಿಗಳಿಗೆಂದು ಸರ್ಕಾರ ಅನಿಭ೯ದಿತ ಯೋಜನೆ ಅಡಿ 2, ಕೋಟಿ 10ಲಕ್ಷ ರೂಗಳ ಅನುದಾನವನ್ನು ಸ್ಥಳೀಯ ತಾಲ್ಲೂಕು ಪಂಚಾಯಿತಿಗೆ ಬಿಡುಗಡೆ ಮಾಡಿದೆ.
ಅನುದಾನಕ್ಕೆ ತಕ್ಕಂತೆ ಅಧಿಕಾರಿಗಳು ಏಕಪಕ್ಷಿಯವಾಗಿ ಕ್ರಿಯಾ ಯೋಜನೆ ಪಟ್ಟಿಯನ್ನು ರೂಪಿಸಿ ಅನುದಾನವನ್ನು ಲೂಟಿ ಮಾಡಲು ಸಿದ್ದಪಡಿಸಿದ ಕ್ರಿಯಾ ಯೋಜನೆ ಆಗಿದೆ ಎಂದು ತಾಲ್ಲೂಕು ಸಿಪಿಎಂ ಪಕ್ಷದ ಬೆಂಬಲಿತ ಗ್ರಾಂ.ಪಂ.ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಕಾರ್ಯಕರ್ತರು ದಾಖಲೆ ಸಮೇತ ಆರೋಪಿಸುತ್ತಾ ಗುಡಿಬಂಡೆ ತಾ.ಪಂ.ಕಚೆರಿಗೆ ಮುತ್ತಿಗೆ ಹಾಕಿ ಪ್ರತಿಭಟಸಿದರು.
ತಾ.ಪಂ.ನಲ್ಲಿ ಚುನಾಯಿತ ಸದಸ್ಯರು ಇಲ್ಲದ ಕಾರಣ ಸಂಬಂಧ ಪಟ್ಟ ತಾ.ಪಂ.ಇ.ಓ.ಡಿ.ಎಸ್.ರವೀಂದ್ರ ಮತ್ತು ಜಿಲ್ಲಾ ಪಂಚಾಯಿತಿ ಎಇಇ ರವರು ಏಕಪಕ್ಷಿಯವಾಗಿ ಶಾಸಕರ ಒತ್ತಡಗಳಿಗೆ ಮಣಿದು ಪ್ರಾದೇಶಿಕ ಅಸಮಾನತೆಯ ನಿಯಮಗಳನ್ನು, ಹಾಗೂ ಸರಕಾರದ ಸೂತ್ತೋಲೆ ಮತ್ತು ಮಾಗ೯ ಸೂಚಿಗಳನ್ನು ಉಲ್ಲಂಘನೆ ಮಾಡಿ ಕುಡಿಯುವ ನೀರು ನೈರ್ಮಲ್ಯ, ಪರಿಸರ ಸಂರಕ್ಷಣೆ, ಎಸ್.ಟಿಪಿ.ಮತ್ತು ಟಿಎಸ್.ಪಿ ಮತ್ತು ಯಾವುದೇ ಶಾಶ್ವತ ಅಭಿವೃದ್ಧಿ ಯೋಜನೆಗಳಿಗೆ ಈ ಅನುದಾನದಲ್ಲಿ ಆಧ್ಯತೆಯನ್ನು ನೀಡದೆ. ಬರೀ ಸುಣ್ಣ. ಬಣ್ಣದ ಕಾಮಗಾರಿಗಳಿಗೆ ಮಾತ್ರ ಆದ್ಯತೆಯನ್ನು ನೀಡಿ ಜಿ.ಪಂನಿಂದ ಕ್ರಿಯಾ ಯೋಜನೆ ಪಟ್ಟಿ ಗೆ ಅನುಮೋದನೆಯನ್ನು ಪಡೆದು ಕೆಲವು ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿದ್ದು ಶಾಸಕರ ಬೆಂಬಲಿಗ ಸೋಮೆನಹಳ್ಳಿ ಅಶೋಕ್ ಎಂಬುವರ ಒಬ್ಬರ ಹೆಸರಿಗೆ 33ಲಕ್ಷರೂಗಳ ವಿವಿಧ ಕಾಮಗಾರಿಗಳಿಗೆ ವೈಯಕ್ತಿಕ ಗುತ್ತಿಗೆಯನ್ನು ಕಾನುನೂ ಬಾಹಿರವಾಗಿ ನೀಡಲಾಗಿದೆ ಎಂದು ವರ್ಲಕೊಂಡ ಗ್ರಾ.ಪಂ.ಉಪಾಧ್ಯಕ್ಷ ಬಾಬು ಟೀಕಪ್ರಹಾರ ಮಾಡಿದರು.
ಕೇವಲ ಶಾಸಕರ ಬೆಂಬಲಿಗರಿಗೆ ಅನುಕೂಲವಾಗುವಂತಹ ಕಾಮಗಾರಿಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ ಇದರಿಂದ ಲಕ್ಷಾಂತರ ರೂಗಳನ್ನು ಲೂಟಿ ಮಾಡಲು ಒಂದು ವ್ಯವಸ್ಥಿತ ಪಿತೂರಿಯಿಂದ ಕದ್ದು ಮುಚ್ಚಿ ತಯಾರಿಸಿದ ಕಾಮಗಾರಿಗಳ ಪಟ್ಟಿಯಾಗಿದ್ದು ಇದನ್ನು ಈ ಕೂಡಲೇ ಅಮಾನತ್ತಿನಲ್ಲಿಟ್ಟು ಹೋಸದಾಗಿ ಅಭಿವೃದ್ಧಿ ಕಲ್ಯಾಣದ ಕಾಮಗಾರಿಗಳಿಗೆ ಅವಕಾಶ ನೀಡಬೇಕೆಂದು ಎಂದು ಅಧಿಕಾರಿಗಳ ಬೇಜವಾಬ್ದಾರಿಯನ್ನು ಖಂಡಿಸುತ್ತಾ ಶಾಸಕರೋಬ್ಬರೆ ಜನಪ್ರತಿನಿಧಿ ಅಲ್ಲ, ನಾವು ಕೂಡ ಸ್ಥಳೀಯ ಗ್ರಾ.ಪಂ.ಸದಸ್ಯರು ಕೂಡ ಜನಪ್ರತಿನಿಧಿಗಳೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈಗ ಅನುಮೋದನೆ ಪಡೆದಿರುವ ಕ್ರಿಯಾ ಯೋಜನೆ ಪಟ್ಟಿಯನ್ನುರದ್ದುಪಡಿಸಿ ಎಲ್ಲಾ ಹಳ್ಳಿಗಳಿಗೂ ಮತ್ತು ಎಲ್ಲಾ ವಗ೯ಗಳಿಗೆ ಒಳಿತಾಗುವಂತಹ ಕ್ರಿಯಾ ಯೋಜನೆ ಪಟ್ಟಿಯನ್ನು ತಯಾರಿಸುವಂತೆ ಅಧಿಕಾರಿಗಳನ್ನು ದೇವರಾಜ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಸ್ಥಳಕ್ಕೆ ತಾ.ಪಂ.ಇ.ಓ ಆಗಮಿಸಿ ಕ್ರೀಯಾ ಯೋಜನೆಯಲ್ಲಿ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ಪಡೆದ ಪಟ್ಟಿಯಂತೆ ಕಾಮಗಾರಿಗಳನ್ನು ಕ್ರಿಯಾ ಯೋಜನೆ ಪಟ್ಟಿಗೆ ಸೇರಿಸಲಾಗಿದೆ. ಈಗ ಪೂರ್ತಿ ಪಟ್ಟಿಯನ್ನುರದ್ದುಗೋಳಿಸಲು ಸಾಧ್ಯವಿಲ್ಲ ಆದ್ಯತೆ ಮೇರೆಗೆ ಕೆಲವೋಂದು ಕಾಮಗಾರಿಗಳನ್ನು ಬದಲಿಸಿ ಆಗಿರುವ ಲೋಪ ದೋಷಗಳನ್ನು ಮತ್ತು ತಾರತಮ್ಯವನ್ನು ಸರಿಪಡಿಸಲಾಗುವುದೆಂದು ಮನವಿ ಸ್ವೀಕರಿಸಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ವಾಪಸ್ ಪಡೆದರು.
ಪ್ರತಿಭಟನೆಯ ನೇತೃತ್ವವನ್ನು ಗ್ರಾ.ಪಂ.ಸದಸ್ಯರಾದ ಗಂಗಾಧರ,ಬಾಲಪ್ಪ,ಜಿ.ಡಿ.ವೆಂಕಟೇಶ್, ರವಿಕುಮಾರ್,ಮುಖಂಡರಾದ ಮಾಜಿ.ತಾ.ಪಂ.ಸದಸ್ಯ ಟಿ.ಮಂಜುನಾಥ,ರಾಜಪ್ಪ, ಆದಿನಾರಾಯಣ,ದೇವರಾಜು,ನಾಗರಾಜು ಸಿಪಿಎಂ ಕಾಯ೯ದಶಿ ಹೆಚ್.ಪಿ.ಲಕ್ಷ್ಮೀನಾರಾಯಣ ವಹಿಸಿದರು.