ಸಾಹಿತಿ ಚಿಂತಕ ಸಮಾಜಸೇವಕ ಆರ್. ಕೆ. ಸುಬೇದಾರ್ ಹಿರೇಮನ್ನಾಪುರ್ ಅವರು ಕರುನಾಡ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ ಗೆ ಭಾಜನರಾಗಿದ್ದಾರೆ.
ಕಾರಟಗಿಯ ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್ ಅವರು ನೀಡುವ 2022ರಾಜ್ಯ ಪ್ರಶಸ್ತಿಗೆ ಸಾಹಿತಿ ಆರ್ .ಕೆ ಸುಬೇದಾರ್ ಅವರನ್ನು ಆಯ್ಕೆ ಮಾಡಿರುವದಾಗಿ ಟ್ರಸ್ಟ್ ಅಧ್ಯಕ್ಷ ಜೆ ನಾಗರಾಜ್ ಪುಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಯನ್ನು ಧಾರವಾಡದ ರಂಗಾಯಣ ಸುವರ್ಣ ಸಾಂಸ್ಕೃತಿಕ ಸಮುಚ್ಚ್ಯದಲ್ಲಿ 2-2-2022 ರಂದು ಪ್ರಧಾನ ಮಾಡಲಾಗುವುದು.ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಮಂಜಮ್ಮ ಜೋಗತಿ ಪ್ರಶಸ್ತಿ ಪ್ರದಾನ ಮಾಡುವರೆಂದು ಟ್ರಸ್ಟ್ ಅಧ್ಯಕ್ಷ ರು ತಿಳಿಸಿದ್ದಾರೆ.ಕೊಪ್ಪಳ ಜಿಲ್ಲಾ ಕುಷ್ಟಗಿ ತಾಲೂಕು ಹಿರೇಮನ್ನಾಪುರ್ ಗ್ರಾಮದ ಆರ್ ಕೆ ಸುಬೇದಾರ್ ಸಾಹಿತಿಯಾಗಿ ರಂಗ ನಟರಾಗಿ ವಾಗ್ಮಿಯಾಗಿ ಸಮಾಜಸೇವಕರಾಗಿ ಹೆಸರು ಪಡೆದಿದ್ದಾರೆ.
ಇವರ ಪ್ರಕಟಿತ ಕೃತಿಗಳು
ವಾಲ್ಮೀಕಿ ಹೊಂಗಿರಣ
ವಾಲ್ಮೀಕಿ ಸಂದೇಶ
ಮಾನ್ಯಪುರ್
ಗವಿಬೆಳಕು ಸಂಪಾದಿತ ಕೃತಿಗಳು
ಮಹರ್ಷಿ ವಾಲ್ಮೀಕಿ ನಾಟಕ
ನೋವು ನುಂಗಿದವರು ಕವನ ಸಂಕಲನ
ಕೆ ಹೊಸಳ್ಳಿ ನಾಗಲಿಂಗೇಶ್ವರ್ ತಾತನವರು ಚರಿತ್ರೆ
ಜೀವನ್ಮುಖಿ ಸಾಹಿತಿ ಹ ಯ ಇಟಿಯವರ ಅಭಿನಂದನಾ ಗ್ರಂಥ
ಮಹರ್ಷಿ ವಾಲ್ಮೀಕಿ ಐತಿಹಾಸಿಕ ಹಾಡುಗಳು
ಮನಮೋಹಕ ಮಲೇಷಿಯಾ ಪ್ರವಾಸ ಕಥನ
ಹತ್ತು ಕೃತಿಗಳನ್ನು ಹೊರ ತಂದಿದ್ದಾರೆ
ಬೇಡರ ದೊರೆ ಗುಹ ನಾಟಕ ಪ್ರಕಟಣೆ ಹಂತದಲ್ಲಿದೆ
ಇವರ ಪ್ರತಿಭೆ ಗುರುತಿಸಿದದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಪ್ರತಿಷ್ಠಿತ ಡಾ ಅಂಬೇಡ್ಕರ್ ಫೆಲೋಶಿಪ್ 96 ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.
300-ಲೇಖನ ಗಳು ನಾಡಿನ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ
100 ಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ
ಕನಕಗಿರಿ ಸಂಸ್ಥಾನದ ಸುಬೇದಾರ್ ವಂಶಸ್ತರಾದ್ ಇವರು ಊರಲ್ಲಿ ಗಸಿದ್ದೇಶ್ವರ ಪ್ರೌಢ ಶಾಲೆಗೆ ಮೂರು ಎಕರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದು ಎಕರೆ ಜಮೀನು ದಾನ ಮಾಡಿದ್ದನ್ನು ಎಲ್ಲರೂ ಸ್ಮರಿಸುತ್ತಾರೆ
ಅರವತ್ತರ ಇಳಿ ವಯಸ್ಸಿನಲ್ಲಿ ಉತ್ಸಾಹ ದಿಂದ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ
ಹಲವಾರು ಸಂಘ ಗಳಲ್ಲಿ ಪದಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ
ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಕೊಪ್ಪಳ ಜಿಲ್ಲಾ ಅಧ್ಯಕ್ಷ ರಾಗಿ
ಪರಿಶಿಷ್ಟ ಪಂಗಡ ನೌಕರರ ರಾಜ್ಯ ಸಮಿತಿ ಸದಸ್ಯರಾಗಿ
ಕ ಸಾ ಪ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ
ಇವರ ಬಹು ಮುಖ ಪ್ರತಿಭೆ ಗುರುತಿಸಿದ ಕಾರಟಗಿ ಪ್ರಸಾರ ಭಾರತಿ ಟ್ರಸ್ಟ್ ರಾಜ್ಯ ಪ್ರಶಸ್ತಿ ನೀಡಿ ಗೌರವಿಸುತಿದ್ದು ಹೆಮ್ಮೆಯ ಸಂಗತಿಯಾಗಿದೆ.