ಶಿವಮೊಗ್ಗ:ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಆಶೀರ್ವಚನ


                   
                   ಸಭೆಯ ದಿವ್ಯ ಸಾನಿಧ್ಯ ವಹಿಸಿ ಆಶೀವ೯ಚನ ನೀಡಿದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರಾಜ್ಯದಲ್ಲಿ ಬೇಡ ವಾಲ್ಮೀಕಿ ನಾಯಕ ಜನಾಂಗ ವಾಲ್ಮೀಕಿ ಜಯಂತಿ ಆಚರಣೆ ಮೂಲಕ ತಾಲ್ಲೋಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಜಾಗೃತವಾಗುತ್ತಿದ್ದೆವು. ಕಳೆದ 11 ವರ್ಷಗಳ ಕಾಲ ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಗ್ರಾಮದರ್ಶನ ಕಾರ್ಯಕ್ರಮದ ಮೂಲಕ  ಈ ಸಮುದಾಯದ ಸಮಸ್ಯೆಗಳನ್ನು ಅರಿತಾಗ ಸಮುದಾಯದ ಹತ್ತು ಹಲವು ಬೇಡಿಕೆಗಳು ಈಡೇರಬೇಕಾದರೆ ಜನಾಂಗ ರಾಜ್ಯ ಮಟ್ಟದಲ್ಲಿ ಒಂದೇ ವೇದಿಕೆ ಮೂಲಕ ಜಾಗೃತವಾಗಬೇಕು. ಈ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಜಾತ್ರೆ ಆಯೋಜಿಸಲಾಯಿತು.
ರಾಜ್ಯದಲ್ಲಿ ಸಮುದಾಯದ 42 ಲಕ್ಷ ಜನರ ನ್ಯಾಯಯುತ ಬೇಡಿಕೆಗೆ  ಧ್ವನಿಯಾಗಿ ಕಾಯ೯ನಿವ೯ಹಿಸುವಾಗ ಸಮಾಜ ಸಂಘಟಿಸುವ ಜವಾಬ್ದಾರಿಯ ಜೊತೆಗೆ, ಜಾತ್ರೆಯ ಮೂಲಕ ಜಾಗೃತಿಗೊಳಿಸುವ ಮಹತ್ಕಾಯ೯ ಕೈಗೊಂಡಾಗ ವಾಸ್ತವ ಅರಿಯದ ಕೆಲವರು ಸಮಾಜದ ಸಂಘಟನೆಗೆ ಅಡ್ಡಿಪಡಿಸುವುದು, ಅಪಸ್ವರ ಎತ್ತುವುದು ಸಹಜ. ನಾವು ಈ ಜಾಗೃತಿ ಕಾರ್ಯದಿಂದ ಹಿಂದೆ ಸರಿಯುವುದಿಲ್ಲ. ಜಾತ್ರೆಗೆ ದೇಣಿಗೆ ಸಂಗ್ರಹ ಮಾಡಲು ಸಮುದಾಯದ ಜಗದ್ಗುರುಗಳಾಗಿ ನಾವು ಪ್ರತಿ ತಾಲೂಕಿಗೆ ಭೇಟಿ ಕೊಡುವ ಅವಶ್ಯಕತೆ ಇಲ್ಲ. ಮಠದಲ್ಲಿಯೇ ಕುಳಿತು ತಾಲೂಕು ಜಿಲ್ಲಾ ಮುಖಂಡರಿಗೆಜನಪ್ರತಿನಿಧಿಗಳಿಗೆ ಒಂದು ವಾರಗಳ ಕಾಲ ದೂರವಾಣಿ ಸಂಪರ್ಕ ನಡೆಸಿದರೆ ದೇಣಿಗೆ ಸಂಗ್ರಹ ವಾಗುತ್ತದೆ, ಆದರೆ ಉದ್ದೇಶ ಅದಲ್ಲ ಈ ಜಾಗೃತಿ ಜಾತ್ರೆ ಯಾರೋ ಒಬ್ಬ ವ್ಯಕ್ತಿಯಿಂದ ಪಡೆದ ಹಣದಿಂದ ನಡೆಯಬಾರದು. ಸಮುದಾಯದ ಕಟ್ಟಕಡೆಯ ವ್ಯಕ್ತಿ ತನ್ನ ಭಕ್ತಿಯಿಂದ ನೀಡಿದ್ದಾಗಿರಬೇಕು.
ಜಾತ್ರೆ ಜನಸಮುದಾಯದ ಜಾತ್ರೆ ಯಾವುದೇ ಒಬ್ಬ ವ್ಯಕ್ತಿಯನ್ನು ವೈಭವೀಕರಿಸುವ ಜಾತ್ರೆಯಲ್ಲ.  ಸಮುದಾಯದ ಕಟ್ಟ ಕಡೆಯ ವ್ಯಕ್ತಿಯೂ ಸಹ ತನ್ನ ದುಡಿಮೆಯಲ್ಲಿ ಭಕ್ತಿಯಿಂದ ನೀಡಿದ ದೇಣಿಗೆ ಇಂದು ಗುರುಪೀಠ ನಿಮ್ಮೆಲ್ಲರ ಈ ಸಮಾಜದ ಆಸ್ತಿಯಾಗಿದೆ. ನೂರಾರು ವರ್ಷ ಪರಂಪರೆ ಹೊಂದಿರುವ ಮಠಗಳಂತೆ, ಸಮಾಜಗಳಂತೆ, ನಮ್ಮ ಸಮಾಜವೂ ಕೂಡಾ ಒಂದು ಶಕ್ತಿಯಾಗಬೇಕು. ಅದೇ ಕಾರಣಕ್ಕೆ ಶ್ರೀಮಠ ಶಕ್ತಿ ಮತ್ತು ಭಕ್ತಿ ಕೇಂದ್ರವಾಗಿ. ಸಮಾಜದ ಹತ್ತು ಹಲವು ಬೇಡಿಕೆಗಳಿಗೆ ಸಮಾಜದ ಧ್ವನಿಯಾಗಿ ಕೆಲಸ ನಿವ೯ಹಿಸುತ್ತಿದ್ದೇವೆ ಎಂದು ತಿಳಿಸಿದರು.
                  ಸಭೆಯಲ್ಲಿ ಶಿವಮೊಗ್ಗ ತಾಲೋಕು ಅಧ್ಯಕ್ಷರು, ಹಾಗೂ ಸಮಾಜದ ಮುಖಂಡರು, ಯುವಕರು, ವಿವಿಧ ಸಂಘಟನೆಯ ಪದಾಧಿಕಾರಿಗಳು ಮತ್ತು ವಿ.ಎಸ್.ಎಸ್. ಪದಾಧಿಕಾರಿಗಳು ಉಪಸ್ಥಿತರಿದ್ದರು.
  

Discover more from Valmiki Mithra

Subscribe now to keep reading and get access to the full archive.

Continue reading