colornews
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121The post ಕೋವಿಡ್ ಹೆಸರಲ್ಲಿ ಬಿಜೆಪಿ ಜನರಲ್ಲಿ ಭೀತಿ ಹುಟ್ಟಿಸುತ್ತಿದೆ ಎಂಬ ಆರೋಪಕ್ಕೆ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ..! appeared first on Valmiki Mithra.
]]>ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಕೋವಿಡ್ ಹೆಸರಲ್ಲಿ ಬಿಜೆಪಿ ಜನರಲ್ಲಿ ಭೀತಿ ಹುಟ್ಟಿಸುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ಅವರಿಗೆ ಅಷ್ಟು ಧೈರ್ಯ ಇದ್ದುದರಿಂದಲೇ ಎರೆಡರಡು ಬಾರಿ ಕೋವಿಡ್ ಆಸ್ಪತ್ರೆಯಲ್ಲಿ ಮಲಗಿದ್ದರು ಎಂದು ವ್ಯಂಗ್ಯ ಮಾಡಿದರು.
ಅಗತ್ಯವಿದ್ದಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ಟೆಸ್ಟಿಂಗ್ ಪ್ರಮಾಣ ಏರಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮಾಕ್ ಡ್ರಿಲ್ ಪರಿಶೀಲನೆಯ ನಂತರ ಮಾತನಾಡಿದ ಅವರು, ಸದ್ಯ ರಾಂಡಮ್ ಆಗಿ ಟೆಸ್ಟ್ ಮಾಡಲಾಗುತ್ತಿದೆ. ಕೋವಿಡ್ ಪ್ರಮಾಣ ಏರಿಕೆಯಾದಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ಟೆಸ್ಟ್ ಪ್ರಮಾಣದಲ್ಲಿಯೂ ಹೆಚ್ಚಳ ಮಾಡಲಾಗುವುದು ಎಂದರು.
The post ಕೋವಿಡ್ ಹೆಸರಲ್ಲಿ ಬಿಜೆಪಿ ಜನರಲ್ಲಿ ಭೀತಿ ಹುಟ್ಟಿಸುತ್ತಿದೆ ಎಂಬ ಆರೋಪಕ್ಕೆ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ..! appeared first on Valmiki Mithra.
]]>The post ನಾವು ಹೆಚ್ಚಿನ ವೇಗ ಮತ್ತು ವಿಸ್ತರಣೆಯೊಂದಿಗೆ ತೊಡಗಿಸಿಕೊಳ್ಳುತ್ತೇವೆ -ಪ್ರಧಾನಿ ನರೇಂದ್ರ ಮೋದಿ appeared first on Valmiki Mithra.
]]>ರಾಜ್‌ಕೋಟ್‌ನಲ್ಲಿ ಶ್ರೀ ಸ್ವಾಮಿನಾರಾಯಣ ಗುರುಕುಲದ 75ನೇ ‘ಅಮೃತ್ ಮಹೋತ್ಸವ’ವನ್ನು ವಿಡಿಯೋ ಲಿಂಕ್ ಮೂಲಕ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತಮ್ಮ ಸರ್ಕಾರ ಬಂದ ವರ್ಷದಿಂದ ಅಂದರೆ, 2014 ರ ನಂತರ ದೇಶದಲ್ಲಿ ಐಐಟಿ, ಐಐಎಂ ಮತ್ತು ವೈದ್ಯಕೀಯ ಕಾಲೇಜುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಹೇಳಿದರು.
ಭಾರತದ ಉಜ್ವಲ ಭವಿಷ್ಯಕ್ಕಾಗಿ, ನಮ್ಮ ಅಸ್ತಿತ್ವದಲ್ಲಿರುವ ಶಿಕ್ಷಣ ನೀತಿ ಮತ್ತು ಸಂಸ್ಥೆಗಳು ದೊಡ್ಡ ಪಾತ್ರವನ್ನು ವಹಿಸುತ್ತವೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ, ಸ್ವಾತಂತ್ರ್ಯದ ಈ ‘ಅಮೃತ ಕಾಲ’ದಲ್ಲಿ, ಅದು ಶೈಕ್ಷಣಿಕ ಮೂಲಸೌಕರ್ಯವಾಗಲಿ ಅಥವಾ ಶಿಕ್ಷಣ ನೀತಿಯಾಗಲಿ, ನಾವು ಹೆಚ್ಚಿನ ವೇಗ ಮತ್ತು ವಿಸ್ತರಣೆಯೊಂದಿಗೆ ತೊಡಗಿಸಿಕೊಳ್ಳುತ್ತೇವೆ, ”ಎಂದು ಅವರು ಹೇಳಿದರು.
The post ನಾವು ಹೆಚ್ಚಿನ ವೇಗ ಮತ್ತು ವಿಸ್ತರಣೆಯೊಂದಿಗೆ ತೊಡಗಿಸಿಕೊಳ್ಳುತ್ತೇವೆ -ಪ್ರಧಾನಿ ನರೇಂದ್ರ ಮೋದಿ appeared first on Valmiki Mithra.
]]>The post ಕೃಷಿಯನ್ನು ನಂಬಿರುವ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡಬೇಕು -ಕಂದಾಯ ಸಚಿವ ಆರ್.ಅಶೋಕ್ appeared first on Valmiki Mithra.
]]>ನಾವು ಬೇರೆ ಸಮುದಾಯದವರಿಗೆ ಮೀಸಲಾತಿ ಕೊಡಬೇಡಿ ಎಂದು ಹೇಳುವುದಿಲ್ಲ. ಇತರೆ ಸಮುದಾಯದಂತೆ ನಮಗೂ ಕೂಡ ಸಂವಿಧಾನಬದ್ದವಾದ ಮೀಸಲಾತಿ ಕೊಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಮುದಾಯದ ಪರವಾಗಿ ಮನವಿ ಮಾಡುವುದಾಗಿ ತಿಳಿಸಿದರು.
ಈಗಾಗಲೇ ಹಿಂದೆ ನಮ್ಮ ಸಮುದಾಯದ ನಿರ್ಮಲಾನಂದ ಶ್ರೀಗಳು, ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ ಸೇರಿದಂತೆ ಸಮುದಾಯದ ಮುಖಂಡರೆಲ್ಲರೂ ಸಭೆ ಸೇರಿ ನಮಗೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಮುಖ್ಯಮಂತ್ರಿಗೆ ಈಗಾಗಲೇ ಹಸ್ತಾಂತರ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಎಂದರು.
The post ಕೃಷಿಯನ್ನು ನಂಬಿರುವ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡಬೇಕು -ಕಂದಾಯ ಸಚಿವ ಆರ್.ಅಶೋಕ್ appeared first on Valmiki Mithra.
]]>The post ಬಳ್ಳಾರಿ ಉತ್ಸವ- ಜನವರಿ 21 ಮತ್ತು 22ರಂದು ವಿಜೃಂಭಣೆಯಿಂದ ಆಚರಣೆ – ಸಚಿವ ಬಿ. ಶ್ರೀರಾಮುಲು appeared first on Valmiki Mithra.
]]>ಎರಡು ದಿನಗಳ ಬಳ್ಳಾರಿ ಉತ್ಸವವನ್ನು ಆಚರಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಒಂದೊಂದು ಜವಾಬ್ದಾರಿಯನ್ನು ತೆಗೆದುಕೊಂಡು ಅದ್ದೂರಿ ಆಚರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಬಳ್ಳಾರಿ ಮತ್ತು ವಿಜಯನಗರ ಒಂದೇ ಆಗಿದ್ದಾಗ ‘ಹಂಪಿ ಉತ್ಸವ’ ನಡೆಯುತ್ತಿತ್ತು. ಈಗ ಇದೇ ಮಾದರಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ‘ಬಳ್ಳಾರಿ ಉತ್ಸವ’ವನ್ನು 2 ದಿನಗಳ ಕಾಲ ನಗರದ ಡಾ. ರಾಜ್‍ಕುಮಾರ್ ರಸ್ತೆಯ ಮುನಿಸಿಪಾಲ್ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗುವುದು ಎಂದರು .
The post ಬಳ್ಳಾರಿ ಉತ್ಸವ- ಜನವರಿ 21 ಮತ್ತು 22ರಂದು ವಿಜೃಂಭಣೆಯಿಂದ ಆಚರಣೆ – ಸಚಿವ ಬಿ. ಶ್ರೀರಾಮುಲು appeared first on Valmiki Mithra.
]]>The post ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನಾಮಪತ್ರ..! appeared first on Valmiki Mithra.
]]>ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ , ಸಚಿವರಾದ ಜೆ.ಸಿ. ಮಾಧುಸ್ವಾಮಿ, ಗೋವಿಂದ ಕಾರಜೋಳ, ಸರ್ಕಾರದ ಮುಖ್ಯ ಸಚೇತಕ ವೈ.ಎನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರು ಹಾಜರಿದ್ದರು.
ನಾಳೆ ಮೇಲ್ಮನೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಆಡಳಿತಾರೂಢ ಬಿಜೆಪಿ ಸದಸ್ಯರು ಬಹುಮತ ಹೊಂದಿರುವುದರಿಂದ ಬಸವರಾಜ ಹೊರಟ್ಟಿ ಆಯ್ಕೆ ಬಹುತೇಕ ಖಚಿತವಾಗಿದೆ.
The post ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನಾಮಪತ್ರ..! appeared first on Valmiki Mithra.
]]>The post ದಲಿತರಿಗೂ ಪತಿತ ಪಾವನ ಮಂದಿರ ಕೊಟ್ಟ ಸಾವರ್ಕರ್ ದೇವರಾಗಲಿಲ್ಲ – ಬಿಜೆಪಿ ವ್ಯoಗ್ಯ appeared first on Valmiki Mithra.
]]>ಭಾರತ ಜನನಿಯ ತನುಜಾತೆ ಎಂದ ಕುವೆಂಪುರವರಿಗೆ, ಭಾಷೆಯಲ್ಲ, ಕಾವ್ಯವೇ ನವಮೇಘರೂಪ ಎಂದ ಬೇಂದ್ರೆಯವರಿಗೆ ಪ್ರೇರಣೆಯಾದವರು ಸಾವರ್ಕರ್.ಸಾವರ್ಕರ್‌ರನ್ನು ಅಪಾರವಾಗಿ ಪ್ರೀತಿಸುವವರು, ಗೌರವಿಸುವವರ ಸಾಲಲ್ಲಿ ಗಾಂಧೀಜಿಯೂ ನಿಲ್ಲುತ್ತಾರೆ.
ಕಾಂಗ್ರೆಸ್ ನವರು ಪರದೇಶಿ ಟಿಪ್ಪುವನ್ನು ಹೊಗಳುವವರು, ದೇಶಪ್ರೇಮಿ ಸಾವರ್ಕರ್ ಫೋಟೊ ಕಂಡರೂ ಉರಿದು ಬೀಳುವವರು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಟಿಪ್ಪು, ಶಾರಿಕ್ ನಂಥವರೇ ದೇವರಾಗಿದ್ದಾರೆಯೇ ವಿನಾ, ದಲಿತರಿಗೂ ಪತಿತ ಪಾವನ ಮಂದಿರ ಕೊಟ್ಟ ಸಾವರ್ಕರ್ ದೇವರಾಗಲಿಲ್ಲ ಎಂದು ಬಿಜೆಪಿ ಯವರು ಕಾಂಗ್ರೆಸ್ ವಿರುದ್ಧ ವ್ಯoಗ್ಯ ಮಾಡಿದರು.
The post ದಲಿತರಿಗೂ ಪತಿತ ಪಾವನ ಮಂದಿರ ಕೊಟ್ಟ ಸಾವರ್ಕರ್ ದೇವರಾಗಲಿಲ್ಲ – ಬಿಜೆಪಿ ವ್ಯoಗ್ಯ appeared first on Valmiki Mithra.
]]>The post ಕಾಂಗ್ರೆಸ್ ನಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ -ಸಚಿವ ಗೋವಿಂದ ಕಾರಜೋಳ ಆಕ್ರೋಶ appeared first on Valmiki Mithra.
]]>ಬಸವಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿಜೀ ಸೇರಿದಂತೆ ಇನ್ನೂ ಹಲವು ರಾಷ್ಟ್ರೀಯ ನಾಯಕರ ಭಾವಚಿತ್ರಗಳನ್ನ ಹಾಕುತ್ತೇವೆ. ಬಸವಣ್ಣನವರ ಫೋಟೋ ಹಾಕುವ ಬಗ್ಗೆ ನಾವು ಕಾಂಗ್ರೆಸ್ ನಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಕಾಂಗ್ರೆಸ್ ನ್ನ ಜನರು ತಿರಸ್ಕಾರ ಮಾಡಿದ್ದಾರೆ. ಹಾಗಾಗಿ ಅವರು ಬೀದಿಗೆ ಬಿದ್ದು, ಹೋರಾಟ ನಡೆಸಿದ್ದಾರೆ. ದೇಶದ ಜನ, ಅವರು ಅಧಿಕಾರ ನಡೆಸಲು ಸಮ್ಮತಿಸುವುದಿಲ್ಲ ಎಂದು ಗೋವಿಂದ ಕಾರಜೋಳ ಕಿಡಿಕಾರಿದರು.
The post ಕಾಂಗ್ರೆಸ್ ನಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ -ಸಚಿವ ಗೋವಿಂದ ಕಾರಜೋಳ ಆಕ್ರೋಶ appeared first on Valmiki Mithra.
]]>The post ವಿಧಾನಸಭೆ ಅಧಿವೇಶನ ಆರಂಭ; ಗಡಿ ಗದ್ದಲ ನಡುವಲ್ಲೇ ಬೆಳಗಾವಿ ಚಳಿಗಾಲ ಅಧಿವೇಶನ..!? appeared first on Valmiki Mithra.
]]>ಡಿಸೆಂಬರ್ 30 ರವರೆಗಿನ 10 ದಿನಗಳ ಅಧಿವೇಶನವು ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿದೆ, ಏಕೆಂದರೆ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಹಲವಾರು ವಿಷಯಗಳ ಮೇಲೆ ಪರಸ್ಪರ ದಾಳಿ ಮತ್ತು ಪ್ರತಿವಾದವನ್ನು ಮಾಡಲಿವೆ. ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರ ಮತ್ತು ಹಗರಣಗಳು, ಮತದಾರರ ಮಾಹಿತಿ ಕಳ್ಳತನದ ಹಗರಣ, ಗಡಿ ವಿವಾದ ಮತ್ತು ಸರ್ಕಾರದ ನಿರ್ವಹಣೆ, ಕೋಮು ಗಲಭೆ ಮತ್ತು ಕುಕ್ಕರ್ ಸ್ಫೋಟದ ಘಟನೆಗಳೊಂದಿಗೆ ಕಾನೂನು ಸುವ್ಯವಸ್ಥೆ ಮುಂತಾದ ವಿಷಯಗಳಲ್ಲಿ ವಿರೋಧ ಪಕ್ಷಗಳು ಸರ್ಕಾರವನ್ನು ಮೂಲೆಗುಂಪು ಮಾಡುವ ಸಾಧ್ಯತೆಯಿದೆ.
ಮಂಗಳೂರು, ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಹೆಚ್ಚಳ ಸೇರಿದಂತೆ ರೈತರ ಬೇಡಿಕೆಗಳು.ಚುನಾವಣೆಗಳು ಸಮೀಪಿಸುತ್ತಿರುವ ಕಾರಣ, ವಿರೋಧ ಪಕ್ಷಗಳು ಆಡಳಿತದ ವಿಷಯ, 2018 ರ ಚುನಾವಣೆಗೆ ಮುಂಚಿತವಾಗಿ ಪ್ರಣಾಳಿಕೆಯಲ್ಲಿ ನೀಡಲಾದ ” ಈಡೇರಿಸದ” ಭರವಸೆಗಳು ಮತ್ತು ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ ಹಲವಾರು ನಗರ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಬಗ್ಗೆ ಸರ್ಕಾರವನ್ನು ಗುರಿಯಾಗಿಸುವ ಸಾಧ್ಯತೆಯಿದೆ.
The post ವಿಧಾನಸಭೆ ಅಧಿವೇಶನ ಆರಂಭ; ಗಡಿ ಗದ್ದಲ ನಡುವಲ್ಲೇ ಬೆಳಗಾವಿ ಚಳಿಗಾಲ ಅಧಿವೇಶನ..!? appeared first on Valmiki Mithra.
]]>The post ರಾಜ್ಯ ವಿಧಾನಮಂಡಲ ಅಧಿವೇಶನದ ನಂತರ ಎರಡೂ ಪಕ್ಷದ ಮುಖಂಡರು ರಾಜ್ಯದತ್ತ ..! appeared first on Valmiki Mithra.
]]>ರಾಜ್ಯದಲ್ಲಿ ಬಿಜೆಪಿಯ ಸಂಪೂರ್ಣ ಜವಾಬ್ದಾರಿಯನ್ನು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ತೆಗೆದುಕೊಳ್ಳಲಿದ್ದಾರೆ.ಅವರು ರಾಜ್ಯಕ್ಕೆ ಹೆಚ್ಚೆಚ್ಚು ಪ್ರವಾಸ ಮಾಡುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.
ಆಯುಷ್ಮಾನ್ ಕಾರ್ಡ್ ವಿತರಣೆ, ಹಾಡಿ ಮತ್ತು ಹಟ್ಟಿಗಳ ವಾಸಿಗಳಿಗೆ ಹಕ್ಕುಪತ್ರ ವಿತರಣೆ, ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಉದ್ಘಾಟನೆ, ಮೈಸೂರು-ಬೆಂಗಳೂರು ಹೆದ್ದಾರಿ ಅನಾವರಣ… ಹೀಗೆ ವಿವಿಧ ಕಾರ್ಯಕ್ರಮಗಳನ್ನು ಮೋದಿ ಚುನಾವಣೆ ಘೋಷಣೆಗೆ ಮುನ್ನ ಪೂರ್ಣಗೊಳಿಸಲಿದ್ದಾರೆ. ಕಾರ್ಯಕ್ರಮಗಳ ಉದ್ಘಾಟನೆಗಳಿಗಾಗಿ ಮೋದಿ ಪ್ರತಿ ಹದಿನೈದು ದಿನಕ್ಕೊಮ್ಮೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಷಾ ಪ್ರತಿ ವಾರ ರಾಜ್ಯಕ್ಕೆ ಬಂದು ವಿವಿಧ ಕಾರ್ಯಕ್ರಮಗಳ ಜತೆಗೆ ಸಂಘಟನೆಗೂ ಆದ್ಯತೆ ನೀಡಲಿದ್ದಾರೆ.
ರಾಜ್ಯದಲ್ಲಿ ಬಂಡಾಯ ಕಾಣಿಸದಂತೆ ಎಚ್ಚರವಹಿಸಲು ಈಗಾಗಲೇ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಹಿಮಾಚಲಪ್ರದೇಶದಲ್ಲಿ ಹದಿನಾಲ್ಕು ಜನ ಬಂಡಾಯವಾಗಿ ಸ್ಪರ್ಧಿಸಿದ್ದರು. ಅದರಲ್ಲಿ ನಾಲ್ಕು ಜನ ಕಾಂಗ್ರೆಸ್ನಿಂದ ಗೆದ್ದಿದ್ದಾರೆ. ರಾಜ್ಯದಲ್ಲಿ ಆ ರೀತಿಯ ಪರಿಸ್ಥಿತಿ ಉದ್ಭವಿಸದಂತೆ ಎಚ್ಚರಿಕೆ ತೆಗೆದುಕೊಳ್ಳಲು ಚರ್ಚೆ ನಡೆಸಲಾಗಿದೆ.
The post ರಾಜ್ಯ ವಿಧಾನಮಂಡಲ ಅಧಿವೇಶನದ ನಂತರ ಎರಡೂ ಪಕ್ಷದ ಮುಖಂಡರು ರಾಜ್ಯದತ್ತ ..! appeared first on Valmiki Mithra.
]]>The post ದಲಿತ ಹೋರಾಟಗಾರರ ಮೇಲೆ ಲಾಠಿ ಬೀಸುವ ಮೂಲಕ ಬಿಜೆಪಿ ಸರ್ಕಾರ ದಲಿತರ ವಿರುದ್ಧ ತನ್ನೊಳಗಿದ್ದ ದ್ವೇಷ, ಅಸಹನೆ ತೋರಿಸಿದೆ..! appeared first on Valmiki Mithra.
]]>ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುತ್ತೇವೆ ಎಂದಿದ್ದ ಸರ್ಕಾರವೇ ಇಂದು ಲಾಠಿಚಾರ್ಜ್ ನಡೆಸಿ ಜಾರಿಯನ್ನು ನಿರಾಕರಿಸುವ ಸಂದೇಶ ನೀಡಿದೆ ಎಂದು ಟ್ವೀಟ್ ಮಾಡಿದೆ.
ಕೇಸರಿ ಶಾಲು ಹೊದ್ದು ಪುಂಡಾಟಿಕೆ ನಡೆಸುವವರಿಗೆ ಈ ಸರ್ಕಾರದಲ್ಲಿ ರಾಜಮರ್ಯಾದೆ ಸಿಗುತ್ತಿದೆ. ಭ್ರಷ್ಟಾಚಾರ, ಅಕ್ರಮ ನಡೆಸುವವರಿಗೆ, ರೌಡಿಗಳಿಗೆ, ಕ್ರಿಮಿನಲ್‍ಗಳಿಗೆ ರಾಜಮರ್ಯಾದೆ ಸಿಗುತ್ತಿದೆ. ಆದರೆ, ಶಾಂತಿಯಿಂದ ಪ್ರತಿಭಟಿಸುವ ದಲಿತ ಹೋರಾಟಗಾರರಿಗೆ ಮಾತ್ರ ಲಾಠಿಏಟು ಬೀಳುತ್ತಿದೆ. ಬಿಜೆಪಿ ದೃಷ್ಟಿಯಲ್ಲಿ ದಲಿತರು ಕ್ರಿಮಿನಲ್‍ಗಳಂತೆ ಕಾಣುವರೇ ಎಂದು ಕಾಂಗ್ರೆಸ್ ಕಿಡಿಕಾರಿದೆ.
The post ದಲಿತ ಹೋರಾಟಗಾರರ ಮೇಲೆ ಲಾಠಿ ಬೀಸುವ ಮೂಲಕ ಬಿಜೆಪಿ ಸರ್ಕಾರ ದಲಿತರ ವಿರುದ್ಧ ತನ್ನೊಳಗಿದ್ದ ದ್ವೇಷ, ಅಸಹನೆ ತೋರಿಸಿದೆ..! appeared first on Valmiki Mithra.
]]>