Notice: Function _load_textdomain_just_in_time was called incorrectly. Translation loading for the colornews domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121

Warning: Cannot modify header information - headers already sent by (output started at /home/jegprscn/public_html/wp-includes/functions.php:6121) in /home/jegprscn/public_html/wp-includes/feed-rss2.php on line 8
B. Sriramulu bjp Archives - Valmiki Mithra https://valmikimithra.com/archives/tag/b-sriramulu-bjp News Paper Tue, 08 Mar 2022 06:33:32 +0000 en-US hourly 1 https://wordpress.org/?v=6.8.1 https://i0.wp.com/valmikimithra.com/wp-content/uploads/2021/07/cropped-WhatsApp-Image-2021-07-16-at-11.33.21-1.jpeg?fit=32%2C32&ssl=1 B. Sriramulu bjp Archives - Valmiki Mithra https://valmikimithra.com/archives/tag/b-sriramulu-bjp 32 32 207262515 ಬಿ. ಶ್ರೀರಾಮುಲು ಅವರ ಇತಿಹಾಸ ,ಜೀವನ ಚರಿತ್ರೆ..! https://valmikimithra.com/archives/3981 Tue, 08 Mar 2022 06:33:32 +0000 https://valmikimithra.com/?p=3981 ಬಿ. ಶ್ರೀರಾಮುಲು ಅವರು ಆಗಸ್ಟ್ 8, 1971 ರಂದು ಕರ್ನಾಟಕದ ಬಳ್ಳಾರಿಯಲ್ಲಿ ರೈಲ್ವೆ ಉದ್ಯೋಗಿ ಬಿ. ತಿಮ್ಮಪ್ಪ ಮತ್ತು ಗೃಹಿಣಿ ಬಿ. ಹೊನ್ನೂರಮ್ಮ ದಂಪತಿಗೆ ಜನಿಸಿದರು. ನಾಲ್ಕು ಸಹೋದರರು ಮತ್ತು ನಾಲ್ಕು ಸಹೋದರಿಯರಲ್ಲಿ

The post ಬಿ. ಶ್ರೀರಾಮುಲು ಅವರ ಇತಿಹಾಸ ,ಜೀವನ ಚರಿತ್ರೆ..! appeared first on Valmiki Mithra.

]]>
ಬಿ. ಶ್ರೀರಾಮುಲು ಅವರು ಆಗಸ್ಟ್ 8, 1971 ರಂದು ಕರ್ನಾಟಕದ ಬಳ್ಳಾರಿಯಲ್ಲಿ ರೈಲ್ವೆ ಉದ್ಯೋಗಿ ಬಿ. ತಿಮ್ಮಪ್ಪ ಮತ್ತು ಗೃಹಿಣಿ ಬಿ. ಹೊನ್ನೂರಮ್ಮ ದಂಪತಿಗೆ ಜನಿಸಿದರು. ನಾಲ್ಕು ಸಹೋದರರು ಮತ್ತು ನಾಲ್ಕು ಸಹೋದರಿಯರಲ್ಲಿ ಏಳನೇ ಮಗು ಶ್ರೀರಾಮುಲು. ಇವರ ಪತ್ನಿ ಹೆಸರು ಲಕ್ಷ್ಮೀ.

ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡ ಶ್ರೀರಾಮುಲು 1999 ರ ವೇಳೆಗೆ ರಾಜಕೀಯ ವಲಯದಲ್ಲಿ ಪ್ರವರ್ಧಮಾನಕ್ಕೆ ಬಂದರು.

1999 ರಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರಾದರೂ ಕಾಂಗ್ರೆಸ್ಸಿನ ದಿವಾಕರ ಬಾಬು ಅವರ ಎದುರು ಸೋಲು ಅನುಭವಿಸಿದರು. ಆದರೂ ಧೃತಿಗೆಡದ ಅವರು ಮತ್ತೊಮ್ಮೆ ಬಳ್ಳಾರಿಯಿಂದ ಚುನಾವಣೆಗೆ ಸ್ಪರ್ಧಿಸಿ 2004 ರಿಂದ ಸತತ ಮೂರು ಬಾರಿ ಶಾಸಕರಾಗಿ ಜಯಶಾಲಿಯಾದರು.

ಬಿಜೆಪಿಯಲ್ಲಿ ಇರುವಾಗ ಇವರು ಕೆಲ ವಿವಾದಗಳಿಗೆ ಗುರಿಯಾದರು. ನಂತರ ಪಕ್ಷದಲ್ಲಿ ತಮಗೆ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಪಕ್ಷ ತೊರೆದರು. ಆದಾಗ್ಯೂ 2014ರ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿಯೊಂದಿಗಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮತ್ತೆ ಪಕ್ಷ ಸೇರ್ಪಡೆಯಾದರು.

ನಂತರ ಬಿಜೆಪಿಯಿಂದಲೇ 2014ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 16ನೇ ಲೋಕಸಭೆಯ ಸಂಸದರಾಗಿ ಚುನಾಯಿತರಾದರು. 2018ರಲ್ಲಿ ನಡೆದ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬದಾಮಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸ್ಪರ್ಧಿಸಿ ಸೋತರು. ಆದರೂ ಇದೇ ಚುನಾವಣೆಯಲ್ಲಿ ಮತ್ತೊಂದು ಕ್ಷೇತ್ರ ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಜಯ ಸಾಧಿಸಿದರು. ನಂತರ ಶಾಸಕ ಸ್ಥಾನ ಉಳಿಸಿಕೊಂಡು ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದರು.

The post ಬಿ. ಶ್ರೀರಾಮುಲು ಅವರ ಇತಿಹಾಸ ,ಜೀವನ ಚರಿತ್ರೆ..! appeared first on Valmiki Mithra.

]]>
3981
ಸಾವಿನ ದವಡೆಯಿಂದ ಪಾರಾಗಿ ಬಂದ ವಿದ್ಯಾರ್ಥಿಗಳ ಮನೆಗೆ ಸಚಿವ ಬಿ.ಶ್ರೀರಾಮುಲು ಭೇಟಿ https://valmikimithra.com/archives/3978 Tue, 08 Mar 2022 06:15:18 +0000 https://valmikimithra.com/?p=3978 ಬಳ್ಳಾರಿ: ಉಕ್ರೇನ್‍ನಿಂದ ತಯಬ್ ಕೌಸರ್, ಶಕೀಬ್, ಸಕೀಮ್, ಸಾಲೋಮನ್ ಎಂಬ ವಿದ್ಯಾರ್ಥಿಗಳು ಬಳ್ಳಾರಿಗೆ ಹಿಂತಿರುಗಿದ್ದಾರೆ. ಇವರೆಲ್ಲರೂ ಅಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಉಕ್ರೇನ್‍ನಿಂದ ಭಾರತಕ್ಕೆ ಮರಳಲು ಹೊರಟಿದ್ದ ಬಳ್ಳಾರಿ ಮೂಲದ ವಿದ್ಯಾರ್ಥಿಗಳನ್ನು ರಷ್ಯಾ ಯೋಧರು

The post ಸಾವಿನ ದವಡೆಯಿಂದ ಪಾರಾಗಿ ಬಂದ ವಿದ್ಯಾರ್ಥಿಗಳ ಮನೆಗೆ ಸಚಿವ ಬಿ.ಶ್ರೀರಾಮುಲು ಭೇಟಿ appeared first on Valmiki Mithra.

]]>
ಬಳ್ಳಾರಿ: ಉಕ್ರೇನ್ನಿಂದ ತಯಬ್ ಕೌಸರ್, ಶಕೀಬ್, ಸಕೀಮ್, ಸಾಲೋಮನ್ ಎಂಬ ವಿದ್ಯಾರ್ಥಿಗಳು ಬಳ್ಳಾರಿಗೆ ಹಿಂತಿರುಗಿದ್ದಾರೆ. ಇವರೆಲ್ಲರೂ ಅಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ.

ಉಕ್ರೇನ್ನಿಂದ ಭಾರತಕ್ಕೆ ಮರಳಲು ಹೊರಟಿದ್ದ ಬಳ್ಳಾರಿ ಮೂಲದ ವಿದ್ಯಾರ್ಥಿಗಳನ್ನು ರಷ್ಯಾ ಯೋಧರು ಅಡ್ಡಗಟ್ಟಿ ತಲೆಗೆ ಬಂದೂಕು ಹಿಡಿದರು. ತಕ್ಷಣವೇ ಜಾಗೃತರಾದ ವಿದ್ಯಾರ್ಥಿಗಳು, ‘ನಾವು ಭಾರತದ ಪ್ರಜೆಗಳು. ಬೇಕಿದ್ದರೆ ನಮ್ಮ ಪಾಸ್ಪೋರ್ಟ್ ನೋಡಿಎಂದು ಹೇಳಿದರು. ಆನಂತರ ರಷ್ಯಾ ಯೋಧರು ಅವರನ್ನು ಬಿಟ್ಟು ಕಳುಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾವಿನ ದವಡೆಯಿಂದ ಪಾರಾಗಿ ಬಂದ  ತಮ್ಮ ಭಯಾನಕ ಅನುಭವಗಳನ್ನು ಅವರೊಂದಿಗೆ ಹಂಚಿಕೊಂಡರು.

 

The post ಸಾವಿನ ದವಡೆಯಿಂದ ಪಾರಾಗಿ ಬಂದ ವಿದ್ಯಾರ್ಥಿಗಳ ಮನೆಗೆ ಸಚಿವ ಬಿ.ಶ್ರೀರಾಮುಲು ಭೇಟಿ appeared first on Valmiki Mithra.

]]>
3978