ಗಂಗಾವತಿ: ನಗರದ ಸರ್ಕಿಟ್ ಹೌಸ್ ನಲ್ಲಿ ಭಾರತೀಯ ಪ್ರಜಾ ಸಂಘದ ಉದ್ಯೋಗ ಖಾತ್ರಿ ಕಾರ್ಮಿಕರ ಘಟಕದ ಗಂಗಾವತಿ ಹಾಗೂ ಕಾರಟಗಿ ತಾಲೂಕುಗಳ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು
ಇದೇ ವೇಳೆ ಉದ್ಯೋಗ ಖಾತ್ರಿ ಕಾರ್ಮಿಕರ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನರಸಿಂಹಲು ಗಾಳೆಮ್ಮಗುಡಿಕ್ಯಾಂಪ್ ಇವರನ್ನು ಆಯ್ಕೆ ಮಾಡಲಾಯಿತು
ಭಾರತೀಯ ಪ್ರಜಾ ಸಂಘದ ರಾಜ್ಯಾಧ್ಯಕ್ಷ ಜಯಪ್ರಕಾಶ್ ಆದೇಶದ ಮೇರೆಗೆ ರಾಜ್ಯ ಸಲಹೆಗಾರ ಮುದಿಯಪ್ಪ ಬರಗೂರು, ರಾಜ್ಯ ಜಂಟಿ ಕಾರ್ಯದರ್ಶಿ ಕಾರ್ಮಿಕರ ಜಿಲ್ಲಾಧ್ಯಕ್ಷ ದುರುಗಪ್ಪ ಹಣವಾಳ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು
ಉದ್ಯೋಗ ಖಾತ್ರಿ ಕಾರ್ಮಿಕರ ಘಟಕ ಗಂಗಾವತಿ: ಗೌರವಾಧ್ಯಕ್ಷ: ಯಮನೂರಪ್ಪ ಪ್ರಗತಿನಗರ
ತಾಲ್ಲೂಕು ಅಧ್ಯಕ್ಷ: ಹುಲುಗಪ್ಪ ಹೊಸಕೇರ,
ಉಪಾಧ್ಯಕ್ಷ: ರಂಜಾನ್ ಸಾಬ್
ಪ್ರಧಾನ ಕಾರ್ಯದರ್ಶಿ: ದುರುಗಪ್ಪ ಕೇಸರಹಟ್ಟಿ
ಜಂಟಿ ಕಾರ್ಯದರ್ಶಿ: ಹುಸೇನಪ್ಪ ಹೊಸಕೇರ
ಖಜಾಂಚಿ: ಶಿವಕುಮಾರ ಮಸಾರಿಕ್ಯಾಂಪ್
ಸಹಕಾರ್ಯದರ್ಶಿ:ಕಾಂತಪ್ಪ ಹಣವಾಳ
ಕಾರಟಗಿ ಘಟಕ:
ಗೌರವಾಧ್ಯಕ್ಷ: ನಾಗಪ್ಪ ಸಿದ್ದಾಪುರ
ತಾಲ್ಲೂಕು ಅಧ್ಯಕ್ಷ: ಶರಣಪ್ಪ ಗೌಡ ಬಸವಣ್ಣಕ್ಯಾಂಪ್
ಉಪಾಧ್ಯಕ್ಷ:ಬೆಟ್ಟಪ್ಪ ಸಿದ್ದಾಪುರ
ಪ್ರಧಾನ ಕಾರ್ಯದರ್ಶಿ: ಹನುಮೇಶ ಬರಗೂರು
ಜಂಟಿ ಕಾರ್ಯದರ್ಶಿ: ಹೊನ್ನುರಪ್ಪ ಬೆನ್ನೂ
ಸಹಕಾರ್ಯದರ್ಶಿ: ರತ್ನಪ್ಪ ಗುಂಡೂರುಕ್ಯಾಂಪ್
ಕಾರ್ಯದರ್ಶಿ: ಉಮೇಶ ಬರಗೂರು
ಭಾರತೀಯ ಪ್ರಜಾ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಕಟ್ಟಿಮನಿ, ಜಿಲ್ಲಾ ಉಪಾಧ್ಯಕ್ಷ ದೇವಪುತ್ರಪ್ಪ ಅಯೋಧ್ಯೆ ಗಂಗಾವತಿ ಹಾಗೂ ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ದೇವಣ್ಣ ಸಂಗಾಪುರ ತಾಲ್ಲೂಕು ಅಧ್ಯಕ್ಷ ಅಂಬ್ರೇಶ ಹಂಪಿ ತಾಲ್ಲೂಕು ಉಪಾಧ್ಯಕ್ಷ ಟಿ.ಗೌಡ ಉಪಸ್ಥಿತರಿದ್ದರು