ರಕ್ಷಿತಾನಾಯಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇದೇ ಸೆಪ್ಟಂಬರ್ 28 ರಿಂದ ಅಕ್ಟೋಬರ್ 4 ರ ವರೆಗೆ ರಾಜಾಸ್ತಾನದ ಜೈಪುರದಲ್ಲಿ ಆಯೋಜಿಸಿರುವ 19 ವರ್ಷದೊಳಗಿನ ಬಾಲಕಿಯರ ಏಕದಿನ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ನಗರದ #ಎವಿಕೆ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ #ರಕ್ಷಿತಾನಾಯಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕು.ರಕ್ಷಿತಾ ನಾಯಕ ಅವರು ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್ ಅವರ ಪುತ್ರಿ.

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗುರುವಾರ ಪ್ರಕಟಿಸಿದ ರಾಜ್ಯದ 20 ಜನ ಆಟಗಾರರ ಪಟ್ಟಿಯಲ್ಲಿ ಕುಮಾರಿ ರಕ್ಷಿತಾ ನಾಯಕ ಅವರು 6 ನೇ ಆಟಗಾರರಿಗೆ ಆಯ್ಕೆಗೊಂಡಿದ್ದು, ಈ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಎಲೈಟ್-ಇ ಗುಂಪಿನಲ್ಲಿ ಪಂಜಾಬ್, ಒಡಿಸ್ಸಾ, ಹಿಮಾಚಲ ಪ್ರದೇಶ, ತ್ರಿಪುರಾ, ಮಿಜೋರಾಂ ಮತ್ತು ಕರ್ನಾಟಕ ತಂಡಗಳು ಲೀಗ್ ಹಂತದಲ್ಲಿ ಪರಸ್ಪರ ಸೆಣಸಲಿದ್ದು, ಅಗ್ರ ತಂಡ ಮುಂದಿನ ನಾಕೌಟ್ ಹಂತ ತಲುಪಲಿದೆ.

ಕರ್ನಾಟಕ ತಂಡ ಹೀಗಿದೆ; ಚಂದಸಿ ಕೃಷ್ಣಮೂರ್ತಿ(ನಾ)ರೋಷನಿ ಕಿರಣ್(ಉ.ನಾ), ನಿಕಿ ಪ್ರಸಾದ್,ಕ್ರಿಷಿಕಾ ರೆಡ್ಡಿ, ಪೂಜಾ ಧನಂಜಯ್, ರಕ್ಷಿತಾನಾಯಕ,ಮೈಥಿಲಿ ವಿನೋದ್, ಸ್ನೇಹ ಜಗದೀಶ್, ಪೂಜಾ ಕುಮಾರಿ ಎಂ, ಪ್ರೇರಣ ಜಿ.ಆರ್, ಸೌಮ್ಯವರ್ಮ(ವಿಕೀ), ಸವಿ ಸುರೇಂದ್ರ, ರೀಮಾ ಫರೀದ್, ನಿರ್ಮಿತ ಸಿ.ಜೆ, ರೋಹಿತ ಚೌದ್ರಿ ಪಿ, ನಜ್ಮಾ ಉನ್ನೀಸ, ಅನುಪಮ ಜಿ.ಬೋಸ್ಲೆ(ವಿಕೀ), ಸಲೊನಿ ಪಿ,ಹರ್ಷಿತಾ ಶೇಖರ್, ಅನುಶ್ರೀ ಸಮಗುಂದ ಅವರುಗಳು ಆಯ್ಕೆಯಾಗಿದ್ದಾರೆ.

Discover more from Valmiki Mithra

Subscribe now to keep reading and get access to the full archive.

Continue reading