ಜನ ಲೋಕ್ ಪಾಲ್ ಹೋರಾಟ ಶುರು ಆಗುವ ಮುಂಚೆ ಅಣ್ಣಾ ಹಜಾರೆ ಯಾರು ಎಂದು ಮಹಾರಾಷ್ಟ್ರ ಬಿಟ್ಟರೆ ದೇಶಕ್ಕೆ ತಿಳಿದಿರಲಿಲ್ಲ
2014 ಚುನಾವಣೆ ಘೋಷಣೆ ಆಗುವವರೆಗೆ ಮೋದಿ ಯಾರು ಎಂದು ಹೆಚ್ಚಿನವರಿಗೆ ತಿಳಿದಿರಲಿಲ್ಲ
ಇವರು ಇಬ್ಬರನ್ನು ದೇಶದ ಮೂಲೆ ಮೂಲೆಗಳಿಗೆ ಪರಿಚಯಿಸಿದ್ದು ದೇಶದ ಎಲ್ಲಾ ಭಾಷೆಯ ಮಾಧ್ಯಮಗಳು
ಇದು ಮಾಧ್ಯಮಗಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟು ಪ್ರಭಾವ ಬೀರುತ್ತದೆ ಎಂಬುವುದಕ್ಕೆ ಉದಾಹರಣೆ
ಅಷ್ಟಕ್ಕೂ ಮಾಧ್ಯಮಗಳು ಈ ಇಬ್ಬರಿಗೂ ಯಾಕೇ ಪ್ರಚಾರ ಕೊಟ್ಟರು
ಅಣ್ಣಾ ಹಜಾರೆ ಮೊದಲಿನಿಂದಲೂ ಮಹಾರಾಷ್ಟ್ರದಲ್ಲಿ ಹೋರಾಟ ಮಾಡುತ್ತಿದ್ದರು ಮಹಾರಾಷ್ಟ್ರ ಸರ್ಕಾರ ಒಂದು ಸಲ ಜೈಲಿಗೆ ಕಳುಹಿಸಿತು ಆಗ ಸಿಗದ ಪ್ರಚಾರ ಏಕಾಏಕಿ ಸಿಗಲು ಕಾರಣವೇನು..
ಕಾರಣ ಅಣ್ಣಾ ಹಜಾರೆ ಹೋರಾಟ ಕಾರ್ಪೊರೇಟ್ ದೊರೆಗಳ ಹಾಗೂ ಸಂಘದ ಪ್ರಾಯೋಜಿತ ಕಾರ್ಯಕ್ರಮ ಆಗಿತ್ತು ಮಾಧ್ಯಮಗಳಿಗೆ ಕೋಟಿ ಕೋಟಿ ಸುರಿದು ಪ್ರಚಾರ ಮಾಡಿಸಲಾಯಿತು
ಅಣ್ಣಾ ಹಜಾರೆಯವರನ್ನು ಗಾಂಧೀಜಿ ಮಟ್ಟಕ್ಕೆ ಏರಿಸಿದರು
ಇದೆಲ್ಲಾ ಝಣ ಝಣ ಕಾಂಚಾಣದ ಮಹಿಮೆ
ಇಲ್ಲವಾದರೆ ಮೊನ್ನೆ ಹಜಾರೆ ಮಹಾರಾಷ್ಟ್ರದಲ್ಲಿ ಉಪವಾಸ ಸತ್ಯಾಗ್ರಹ ಮಾಡುವಾಗ ಮಾಧ್ಯಮಗಳು ಪ್ರಚಾರ ಮಾಡಬೇಕಿತ್ತು
ಮಾಡುವುದು ಬಿಡಿ ತಿರುಗಿಯೂ ನೋಡಲಿಲ್ಲ
ಇನ್ನೂ ಮೋದಿ ಗುಜರಾತ್ ಮುಖ್ಯಮಂತ್ರಿ ಬಿಟ್ಟರೆ ದೇಶಕ್ಕೆ ಕೊಡುಗೆ ಶೂನ್ಯ
ಯಾವತ್ತೂ ಲೋಕಸಭೆಗೆ ಸ್ಪರ್ಧೆ ಮಾಡದೆ ಕೇಂದ್ರ ಮಂತ್ರಿಯಾಗಿ ದೇಶಕ್ಕೆ ಯಾವುದಾದರೂ ದೊಡ್ಡ ಕ್ರಾಂತಿಕಾರಕ ಕೊಡುಗೆ ನೀಡದ ಮೋದಿ ಎಂಬ ಸಾಮಾನ್ಯ ಮುಖ್ಯಮಂತ್ರಿಯನ್ನು
ಅವತಾರ ಪುರುಷ ಭಾರತದ ಭಾಗ್ಯ ವಿಧಾತ ಎಂದು ಬೊಬ್ಬೆ ಹಾಕಿ ಮಾಧ್ಯಮಗಳು ಪ್ರಚಾರ ಮಾಡಿದವು
ಅನಾದಿಕಾಲದಿಂದಲೂ ವ್ಯಾಪಾರಿಗಳಿಂದ ಶ್ರೀಮಂತ ಸಮೃದ್ಧವಾಗಿ ಇದ್ದ ಗುಜರಾತ್ ನ್ನು ಮೋದಿಯೇ ಅಭಿವೃದ್ಧಿ ಮಾಡಿದ್ದು ಎಂದು ಅಬ್ಬರದ ಪ್ರಚಾರ
ಸರಿಯಾಗಿ ಗುಜರಾತ್ ಎಲ್ಲಿ ಇದೆ ಎಂದು ತಿಳಿಯದಿದ್ದ ದೇಶದ ಜನತೆಗೆ ಗುಜರಾತ್ ಮಾಡೆಲ್ ಅಭಿವೃದ್ಧಿ ಹರಿಕಾರ
ಎಂದೆಲ್ಲಾ ಬಿರುದು ಕೊಟ್ಟು ದೇಶದ ಮೂಲೆ ಮೂಲೆಗಳಿಗೆ
ಪ್ರಚಾರ ಮಾಡಿ ಮೋದಿಗೆ ಗೆಲುವು ತಂದುಕೊಟ್ಟು
ದೇಶದ ಜನರನ್ನು ಮೂರ್ಖರನ್ನಾಗಿಸಿದ್ದು ದೇಶದ ಮಾಧ್ಯಮಗಳು
ಮಾಧ್ಯಮಗಳಿಗೆ ಕೋಟಿ ಕೋಟಿ ಸುರಿದದ್ದು ಗುಜರಾತ್ ಮೂಲದ ದೊಡ್ಡ ದೊಡ್ಡ ಕಾರ್ಪೊರೇಟ್ ದೊರೆಗಳು
ಅಷ್ಟಕ್ಕೇ ಮುಗಿಯಲಿಲ್ಲ
ವಿದೇಶದಲ್ಲಿ ಸಭೆ ಸಮಾರಂಭಗಳಲ್ಲಿ ಮೋದಿ ಮೋದಿ ಘೋಷಣೆ
ಅದನ್ನು ನಮ್ಮ ದೇಶದ ಮಾಧ್ಯಮಗಳಲ್ಲಿ ಲೈವ್ ಪ್ರಸಾರ
ಎಲ್ಲವೂ ವಿದೇಶದಲ್ಲಿ ಇರುವ ಗುಜರಾತ್ ಮೂಲದ
ಕಾರ್ಪೊರೇಟ್ ದೊರೆಗಳ ಕೃಪೆ
ಇದನ್ನೆಲ್ಲಾ ಕಾರ್ಪೊರೇಟ್ ದೊರೆಗಳು ಯಾಕೆ ಮಾಡುತ್ತಾರೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಹುಟ್ಟಿದರೆ ಉತ್ತರ ಈಗಾಗಲೇ ಸಿಕ್ಕಿರಬಹುದು..
ದೇಶದ ಸರ್ಕಾರಿ ಸ್ವಾಮ್ಯದ ವಿವಿಧ ಲಾಭದಾಯಕ ಸಂಸ್ಥೆಗಳು ಅರ್ಧ ಬೆಲೆಗೆ ಈಗ ಕಾರ್ಪೊರೇಟ್ ದೊರೆಗಳಿಗೆ ಮಾರಾಟ ಆಗುತ್ತಿದೆ.
ಉದ್ಯಮ ವಲಯದಲ್ಲಿ ಕೇವಲ ಗುಜರಾತ್ ಮೂಲದ ಕಾರ್ಪೊರೇಟ್ ದೊರೆಗಳ ಏಕಸ್ವಾಮ್ಯ ಸ್ಥಾಪನೆಗೆ ಪ್ರಯತ್ನ ನಡೆಯುತ್ತಿದೆ.
ಸಣ್ಣಪುಟ್ಟ ಉದ್ಯಮಿಗಳು ನಿಧಾನವಾಗಿ ತೆರೆಮರೆಗೆ ಸುರಿಯುತ್ತಿದ್ದಾರೆ.
ರಾಷ್ಟ್ರದ ಅಮೂಲ್ಯ ಸಂಪತ್ತು ಕೆಲವೇ ಕೆಲವು ವ್ಯಕ್ತಿಗಳ ಕೈವಶ ಆಗುತ್ತಿದೆ ದೇಶ ದಿವಾಳಿ ಆಗುತ್ತಿದೆ ಕಾರ್ಪೊರೇಟ್ ದೊರೆಗಳು ಅದರಲ್ಲೂ ಗುಜರಾತ್ ಮೂಲದ ಕಾರ್ಪೊರೇಟ್ ದೊರೆಗಳು ದಿನದಿಂದ ದಿನಕ್ಕೆ ಶ್ರೀಮಂತರು ಆಗುತ್ತಿದ್ದಾರೆ
ಪಾಪ ಇದರ ಅರಿವು ಇಲ್ಲದೆ ಇಲ್ಲಿಯೂ ಅಂಧ ಭಕ್ತರು ಶುರು ಮಾಡಿದರು ಹೋದಲ್ಲಿ ಬಂದಲ್ಲಿ ಮೋದಿ ಮೋದಿ
ಒಟ್ಟಿನಲ್ಲಿ ಕಾರ್ಪೊರೇಟ್ ದೊರೆಗಳು ಮಾಧ್ಯಮಗಳು
ಸೇರಿ ದೇಶದ ದೊಡ್ಡ ಜನ ಸಮುದಾಯವನ್ನು ಯಶಸ್ವಿಯಾಗಿ ಮೂರ್ಖರನ್ನಾಗಿಸಿದರು…
ಈಗ ಇದನ್ನು ಐ.ಟಿ ಸೆಲ್ ವಾಟ್ಸಾಪ್ ಯುನಿವರ್ಸಿಟಿ
ವೆಬ್ ನ್ಯೂಸ್ ಪೇಜ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
Content : Harish Poojary