ಮೈಸೂರು ವಿಭಾಗದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಶಾಖಾ ಮಠ ಮಾಡುವ ಉದ್ದೇಶದಿಂದ ಮೈಸೂರು ವಿಭಾಗದ ತಾಲ್ಲೂಕುಗಳಲ್ಲಿ ಪ್ರವಾಸ ಕೈಗೊಂಡಿದ್ದು ಇಂದು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು, ಸಭೆಗೆ ನಂಜನಗೂಡು ತಾಲ್ಲೂಕು ನಾಯಕ ಸಮುದಾಯದ ಬಂಧುಗಳು, ಮುಖಂಡರುಗಳು ಸಮಿತಿಯನ್ನು ಆತ್ಮೀಯವಾಗಿ ಸ್ವಾಗತಿಸಿ ಶಾಖಾ ಮಠ ಸ್ಥಾಪನೆಗೆ ಸಲಹೆ ಸೂಚನೆಗಳನ್ನು ನೀಡಿ ಪೂರ್ವಭಾವಿ ಸಭೆಯನ್ನು ಯಶಸ್ವಿಗೊಳಿಸಿದರು, ಇದೆ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ಮೈಸೂರಿನಲ್ಲಿ ಶಾಖಾ ಮಠ ಮಾಡಲು ನಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರ ಇರುತ್ತದೆ, ಯಾವುದೇ ಕಾರಣಕ್ಕೂ ಹಿಂಜರಿಯದೆ ಮುನ್ನುಗಿ ಸಮುದಾಯದ ಒಳತಿಗಾಗಿ ನಾವೆಲ್ಲ ನಿಮ್ಮೊಂದಿಗೆ ಇದ್ದೇವೆ ಎಂದು ಸರ್ವಾನುಮತದಿಂದ ಬೆಂಬಲ ನೀಡಿದರು. ಈ ಸಂದರ್ಭದಲ್ಲಿ ದ್ಯಾವಪ್ಪ ನಾಯಕ, ಪ್ರಭಾಕರ್ ಹುಣಸೂರು, ಮಯೂರ, ತಾಲ್ಲೂಕು ನಾಯಕರ ಸಂಘದ ಅಧ್ಯಕ್ಷರಾದ ಬಂಗಾರಸ್ವಾಮಿ ತಾಲ್ಲೂಕು ನಾಯಕರ ನೌಕರರ ಸಂಘದ ಅಧ್ಯಕ್ಷರಾದ ಹನುಮಂತ ನಾಯಕ ಚನ್ನನಾಯಕ, ಹದಿನಾರು ಪ್ರಕಾಶ್, ನಾಯಕರ ಸಂಘದ ಉಪಾಧ್ಯಕ್ಷರಾದ HS ಚಂದ್ರು, ಚಂದ್ರಶೇಖರ್ ಸಿಂಧುವಳ್ಳಿ, ಹದಿನಾರು ಮಹೇಶ್, ಸೂರಳ್ಳಿ ಮಹದೇವ ನಾಯಕ, JCB ಮಹೇಶ್, ಮಣಿಕಂಠ, ರಂಗಸ್ವಾಮಿ, ಕಪ್ಪಸೋಗೆ ರವಿ, ಶಿವರಾಜು, ಮಲ್ಲಹಳ್ಳಿ ಶಿವಲಿಂಗನಾಯಕ, ಹಾಗೂ ಮುಖಂಡರು ಉಪಸ್ಥಿತರಿದ್ದರು