ಶ್ರೀ ಮಹರ್ಷಿ ವಾಲ್ಮೀಕಿ ಶಾಖಾ ಮಠ ಮಾಡುವ ಉದ್ದೇಶದಿಂದ ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು,

ಮೈಸೂರು ವಿಭಾಗದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಶಾಖಾ ಮಠ ಮಾಡುವ ಉದ್ದೇಶದಿಂದ ಮೈಸೂರು ವಿಭಾಗದ ತಾಲ್ಲೂಕುಗಳಲ್ಲಿ ಪ್ರವಾಸ ಕೈಗೊಂಡಿದ್ದು ಇಂದು ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು, ಸಭೆಗೆ ಟಿ ನರಸೀಪುರ ನಾಯಕ ಸಮುದಾಯದ ಬಂಧುಗಳು, ಮುಖಂಡರುಗಳು ಸಮಿತಿಯನ್ನು ಆತ್ಮೀಯವಾಗಿ ಸ್ವಾಗತಿಸಿ ಶಾಖಾ ಮಠ ಸ್ಥಾಪನೆಗೆ ಸಲಹೆ ಸೂಚನೆಗಳನ್ನು ನೀಡಿ ಪೂರ್ವಭಾವಿ ಸಭೆಯನ್ನು ಯಶಸ್ವಿಗೊಳಿಸಿದರು, ಇದೆ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ಮೈಸೂರಿನಲ್ಲಿ ಶಾಖಾ ಮಠ ಮಾಡಲು ನಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರ ಇರುತ್ತದೆ, ಯಾವುದೇ ಕಾರಣಕ್ಕೂ ಹಿಂಜರಿಯದೆ ಮುನ್ನುಗಿ ಸಮುದಾಯದ ಒಳತಿಗಾಗಿ ನಾವೆಲ್ಲ ನಿಮ್ಮೊಂದಿಗೆ ಇದ್ದೇವೆ ಎಂದು ಸರ್ವಾನುಮತದಿಂದ ಬೆಂಬಲ ನೀಡಿದರು. ಈ ಸಂದರ್ಭದಲ್ಲಿ ದ್ಯಾವಪ್ಪ ನಾಯಕ, ಪ್ರಭಾಕರ್ ಹುಣಸೂರು, ಮಯೂರ, ಚನ್ನನಾಯಕ, ಹದಿನಾರು ಪ್ರಕಾಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಹೊನ್ನ ನಾಯಕರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಆಲಗೂಡು ನಾಗರಾಜು, ಒಎ ಶಿವಸ್ವಾಮಿ, ವೆಂಕಟರಾಮಯ್ಯ, ಗೋವಿಂದರಾಜು, ಗವಿ, ಬನ್ನೂರು ಪುರಸಭೆ ಮಾಜಿ ಸದಸ್ಯರು ಚಿಕ್ಕಣ್ಣ, ಖಿS ಕುಮಾರ್, ಸಿದ್ದರಾಜು, ಖ ರಘು, ನಾಗರಾಜು ತಲಕಾಡು, ಮೂಗುರು ಕುಮಾರ್, ಪುರಸಭೆ ಮಾಜಿ ಸದಸ್ಯರು ಶಿವರಾಜು, ಸುಂದರ ನಾಯಕ, ಡಿ.ಮಾದೇಶ್.ವಾಸು, ರಾಜಣ್ಣ ತಾಯೂರು, ಶಶಿಧರ್, ಬಸವರಾಜು ಇಂಡವಾಳು, ವಿಜಯ್ ಹಾಗೂ ಹಲವು ಮುಖಂಡರು ಉಪಸ್ಥಿತರಿದ್ದರು

Discover more from Valmiki Mithra

Subscribe now to keep reading and get access to the full archive.

Continue reading