ವಿಜಯಪುರ: ಕೇಂದ್ರ ಸರ್ಕಾರವು ಹಿಂದುಳಿದ ವರ್ಗಗಳ ಹಾಗೂ ಕೆಲವು ಪಂಗಡಗಳ ಅಭಿವೃದಿಗಾಗಿ ಕ್ರಮ ಸಂಖ್ಯೆ 38ರಲ್ಲಿ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರಗಳನ್ನು ನೀಡುವಂತೆ ಸೂಚಿಸುತ್ತದೆ.ಕೇಂದ್ರ ಸರ್ಕಾರದ ಅದೇಶದಂತೆ ವಾಲ್ಮೀಕಿ ಬೇಡರ ಉಪಪಂಗಡವಾದ ತಳವಾರ ಹಾಗೂ ಪರಿವಾರ ಜನಾಂಗಕ್ಕೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರಗಳನ್ನು ನೀಡಬೇಕೆಂದು ನಿಯಮವಿದರು ಅದನ್ನು ಉಲಂಘಿಸಿ 14 ಜನ ಗಂಗಾ ಮತಸ್ಥ ತಳವಾರಾರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರಗಳನ್ನು ನೀಡಿದು, ಇದು ಕಾನೂನು ಬಾಹಿರ ಎಂದು ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ವಿಜಯಪುರ ವತಿಯಿಂದ ದೇವರಹಿಪ್ಪರಗಿ ತಾಲ್ಲೂಕಿನ ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದು.
ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.