ಕೆಪಿಸಿಸಿ ಮಾಜಿ ಅಧ್ಯಕ್ಷ, ಪುದುಚೇರಿ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ವಾಹನದ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ಮಾಡಿರುವ ಘಟನೆ ಪುದುಚೇರಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದಿದೆ.
ಸಭೆ ಮುಗಿಸಿ ಹೊರ ಬರುವ ವೇಳೆ ಕಾಂಗ್ರೆಸ್ ಪಕ್ಷದ ಒಂದು ಬಣ ದಿನೇಶ್ ಗುಂಡೂರಾವ್ ಅವರನ್ನು ಕಾರು ಹತ್ತದಂತೆ ತಡೆದು ಗಲಾಟೆ ನಡೆಸಿದೆ. ದಿನೇಶ್ ಗುಂಡೂರಾವ್ ಅವರನ್ನು ಕಾರು ಹತ್ತಲು ಬಿಡದಂತೆ ತಳ್ಳಾಡಿದ್ದಾರೆ.. ಈ ವೇಳೆ ದಿನೇಶ್ ಗುಂಡೂರಾವ್ ಅವರ ಕಾರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾನಿ ಮಾಡಿದ್ದಾರೆ.
ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಘೋಷಣೆ ಕೂಗುತ್ತಿದ್ದರು. ಮಾಜಿ ಸಿಎಂ ನಾರಾಯಣಸ್ವಾಮಿ ಅವರ ಬೆಂಬಲಿಗರು ಕೂಡ ಅಲ್ಲಿ ಜಮಾಯಿಸಿದ್ದರಿಂದ ಎರಡು ಗುಂಪುಗಳ ನಡುವೆ ಶುರುವಾದ ವಾಗ್ವಾದ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಇದೇ ವೇಳೆ ದಿನೇಶ್ ಗುಂಡೂರಾವ್ ಸಭೆ ಮುಗಿಸಿ ಹೊರಬರುತ್ತಿದ್ದಂತೆ ಅವರು ಸುತ್ತುವರಿದ ಕಾರ್ಯಕರ್ತರು, ನಾಯಕತ್ವ ಬದಲಾವಣೆ ಕುರಿತು ಉತ್ತರ ನೀಡುವಂತೆ ಒತ್ತಾಯಿಸಿದ್ದಾರೆ.
ಗುಂಡೂರಾವ್ ಅವರನ್ನು ಕಾರು ಹತ್ತಲೂ ಬಿಡದೆ ತಡೆದು ಕಾರಿಗೂ ಹಾನಿಮಾಡಿದ್ದಾರೆ…