ಬೆಂಗಳೂರು: ಗೌಡರ ಯುವಸೇನೆ ಉದ್ಘಾಟನಾ ಸಮಾರಂಭ ಮತ್ತು ಉಚಿತ ವಧು-ವರ ಮುಖಮುಖಿ ಕಾರ್ಯಕ್ರಮವನ್ನು ದಿನಾಂಕ 18 ಸೆಪ್ಟೆಂಬರ್ 2022 ಭಾನುವಾರದಂದು ಒಕ್ಕಲಿಗರ ಸಮುದಾಯ ಭವನ ಜಿ ರಾಮೇಗೌಡ ರಸ್ತೆ ಗಂಗಾಧರಪುರ ದೊಡ್ಡಪುರ ತಾಲೂಕಿನಲ್ಲಿ ನಡೆಯಲಿದೆ.
ಬೆಳಗ್ಗೆ 8:00 ಘಂಟೆಯಿಂದ ನೊಂದಣಿ ಆರಂಭವಾಗುತ್ತದೆ. ಯಾವುದೇ ರೀತಿಯ ನೋಂದಣಿ ಶುಲ್ಕವಾಗಲಿ ಅರ್ಜಿ ಶುಲ್ಕವಾಗಲಿ ಇರುವುದಿಲ್ಲ, ಸಂಪೂರ್ಣ ಉಚಿತವಾಗಿರುತ್ತದೆ ದಲ್ಲಾಳಿಗಳಿಗೆ ಅವಕಾಶವಿಲ್ಲ, ಜೊತೆಗೆ ವಿಧುರ/ ವಿಧವೆ, ಅಂಗವಿಕಲರು ವಿಚ್ಛೇದಿತರು ಭಾಗವಹಿಸಬಹುದು ಯಾರಾದರೂ ದುಡ್ಡು ಕೇಳಿದರೆ ಸಂಘಟಕರಿಗೆ ತಿಳಿಸಿ, ನೋಂದಣಿ ಮಾಡಿಸಿದವರಿಗೆ ಮಾತ್ರ ಮೊದಲ ಆದ್ಯತೆ ಮತ್ತು ಅವಕಾಶ ಇನ್ನು ಗೌಡರ ಯುವಸೇನೆ ಉದ್ಘಾಟನಾ ಸಮಾರಂಭಕ್ಕೇ ಗೌಡರ ಯುವಸೇನೆ ರಾಜ್ಯಧ್ಯಕ್ಷರಾದ ಶ್ರೀನಿವಾಸ್ ಗೌಡ ಕೂಡ ಆಗಮಿಸಲಿದ್ದಾರೆ ಈ ಎಲ್ಲಾ ಉಪಯೋಗವು ಒಕ್ಕಲಿಗರ ಜನಾಂಗದವರಿಗೆ ಮಾತ್ರ ಮೀಸಲಿಡಲಾಗಿದೆ.
ಇನ್ನು ನೋಂದಣಿ ಮಾಡಲು ಬೇಕಾಗಿರುವ ದಾಖಲಾತಿಗಳು ಆಧಾರ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಫೋಟೋ ಒಂದು, ಪೋಸ್ಟ್ ಕಾರ್ಡ್ ಸೈಜ್ ಫೋಟೋ ಒಂದು ಇಷ್ಟು ದಾಖಲಾತಿಯನ್ನು ನೀಡಿದರೆ ಅವಕಾಶ ಒದಗಿಸಲಾಗುತ್ತದೆ