ಪೊಲೀಸ್ ಆಗಲು ಆಗಲಿಲ್ಲ ಅಂತ ನಕಲಿ ಪೊಲೀಸ್ ಆಗಿ ಕಳ್ಳತನ ಹಾಗೂ ಸುಲಿಗೆಗೆ ಇಳಿದಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
23 ವರ್ಷದ ವಿನಯ್ ಕುಮಾರ್ ಬಂಧಿತ ಆರೋಪಿ.ವಿಜಯನಗರದ ಬಿಸ್ಲಿ ಇರುವ ಮೂಡಲಪಾಳ್ಯ ನಿವಾಸಿ ವಿನಯ್ ಕುಮಾರ್ ಪಿಎಸ್ ಐ ಆಗಲು ತಯಾರಿ ನಡೆದಿತ್ತು.
ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ನಲ್ಲಿ ಟಾಪರ್ ಆಗಿದ್ದ , ಅಂದುಕೊಂಡಂತೆ ಪೊಲೀಸ್ ಇಲಾಖೆಗೆ ಸೇರಲು ಆಗಲಿಲ್ಲ ಅಂತ ಕಳವು ಮಾಡಲಾರಂಭಿಸಿದ್ದಾನೆ.
ಚಂದ್ರ ಲೇಔಟ್ ನಲ್ಲಿ ಬೈಕ್ ಕಳವು ಮಾಡಿದ್ದನು. ನಂತರ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಹೆಲ್ಮೆಟ್ ಧರಿಸಿ ವಾಹನಗಳನ್ನು ನಿಲ್ಲಿಸಿ ಸುಲಿಗೆ ಮಾಡ್ತಿದ್ದ. ಈ ವಿಷಯ ತಿಳಿದು ಪೊಲೀಸರು ಆತನನ್ನು ಬಂಧಿಸಿದ್ದಾರೆ.