ಮೈಸೂರು:ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಿರಲಿಲ್ವಾ..? ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತಾಡುವ ಮುನ್ನ ಅವರ ಚರಿತ್ರೆಗಳನ್ನು ಓದಿ. ನಾವು ಯಾರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋದವರಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ನಾವೆಲ್ಲಾ ಸ್ವಾತಂತ್ರ್ಯ ಹೋರಾಟದ ಫಲ ತಿನ್ನುತ್ತಿದ್ದೇವೆ. ಅವರು ಜೈಲಿಗೆ ಹೋಗಿಲ್ಲ, ಇವರು ಜೈಲಿಗೆ ಹೋಗಿಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಬಿಜೆಪಿ ಪರ ಮಾತನಾಡಿದ್ದಾರೆ.
ಇನ್ನು ಸಿಎಂ ಬದಲಾಗುತ್ತಾರೆ ಎಂಬ ಕಾಂಗ್ರೆಸ್ ಟ್ವೀಟ್ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಇಳಿಸಲು ಯಾರಿಗೆ ಅಧಿಕಾರ ಇದೆ..? ಕಾಂಗ್ರೆಸ್ನಲ್ಲಿ ಯಾವ ಸಿಎಂಗಳು ಹೇಗೆ ಬದಲಾದರೂ ಎಂಬುದು ಗೊತ್ತಿಲ್ವಾ..? ಸಿಎಂ ಬಸವರಾಜ್ ಬೊಮ್ಮಾಯಿ ಬಗ್ಗೆ ಸುಮ್ಮನೆ ಟೀಕೆ ಮಾಡಬೇಡಿ. ಬೊಮ್ಮಾಯಿ ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ದಕ್ಷ ಆಡಳಿತಗಾರನಾಗಿ ನಾಡಿನ ಸೇವೆ ಮಾಡುತ್ತಿದ್ದಾರೆ. ಸಿಎಂ ಬದಲಾಗುತ್ತಾರೆ ಎಂದು ಸುಮ್ಮ ಸುಮ್ಮನೆ ಮಾತಾಡಬೇಡಿ ಬೊಮ್ಮಾಯಿ ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ಬರಲಿ ಎಂದರು.