ಶಿವಮೊಗ್ಗ: ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ನಾಳೆ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಹೇಳಿದ್ದಾರೆ.
ದೇಶದ ಸಂವಿಧಾನ, ರಾಷ್ಟ್ರಧ್ವಜದ ಬಗ್ಗೆ ಅಗೌರವದಿಂದ ಬಿಜೆಪಿಯವರು ಮಾತನಾಡಿದ್ದರು. ಆದರೆ ಇವತ್ತು ಅವರೇ ಹರ್ ಘರ್ ತಿರಂಗಾ ಅಂತಾ ಮಾಡುತ್ತಿದ್ದಾರೆ. ಅವರಿಗೆ ಗೊತ್ತಾಗಿದೆ. ಸಂವಿಧಾನದ ಬಗ್ಗೆ ಮಾತನಾಡಿದರೆ ಉಳಿಯಲ್ಲ ಎಂದು. ಇದೇ ಸಂವಿಧಾನವೇ ಜನರಿಗೆ ಬದಲಾಯಿಸುವ ಶಕ್ತಿಯನ್ನು ಕೊಟ್ಟಿದೆ. ಸ್ವಾತಂತ್ರ್ಯ ತರುವುದಕ್ಕೆ ಬಿಜೆಪಿಯವರ ಕೊಡುಗೆ ಏನು ಇಲ್ಲ ಎಂದರು.
75ನೇ ಸ್ವಾತಂತ್ರ್ಯದ ಸಮಯದಲ್ಲಿ ಬದಲಾವಣೆಯ ಗಾಳಿ ಕಾಣಿಸುತ್ತಿದೆ. ಹಿಂಬಾಗಿಲ ನೀಚ ರಾಜಕಾರಣಕ್ಕೆ ಉತ್ತರ ದೊರಕುತ್ತಿದೆ ಎಂದಿದ್ದಾರೆ. ಅಮಿತ್ ಶಾ ಚುನಾವಣಾ ಪೂರ್ವ ಗಲಾಟೆಗಳಿಗೆ ಕುಮ್ಮಕ್ಕು ನೀಡುತ್ತಾರೆ. ಅನ್ಯರನ್ನು ದ್ವೇಷಿಸಬೇಕು ಎಂದು ಯಾವುದೇ ಧರ್ಮದಲ್ಲಿ ಹೇಳಿಲ್ಲ. ಬ್ರಿಟೀಷರಿಂದ ಸ್ವಾತಂತ್ರ್ಯ ಸಿಕ್ಕಿದೆ. ದೇಶಕ್ಕೆ ಬಿಜೆಪಿಯಿಂದ ಸಿಗಬೇಕು. ಹರ್ ಘರ್ ತಿರಂಗಾ ಅಭಿಯಾನ ಮಾಡಲು ಹೊರಟಿದ್ದಾರೆ. ಇದೇ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕೆ ರಿಯಾಯಿತಿ ಕೊಟ್ಟರು. ಆದರೆ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಧ್ವಜಕ್ಕೆ ಹಣ ಸಂಗ್ರಹಣೆ ಮಾಡುತ್ತಿದ್ದಾರೆ. ಧ್ವಜ ಹಾರಿಸುವುದು ನಮ್ಮ ರಕ್ತದಲ್ಲಿದೆ, ಬಿಜೆಪಿ ಪಾಠ ನಮಗೆ ಬೇಕಿಲ್ಲ ಎಂದರು ಕಿಡಿಕಾರಿದರು.