ಮೈಸೂರು: ಹೋವಲ್ಕರ್ ಬಿಜೆಪಿ ಪತ್ರಿಕೆ ಆರ್ಗನೈಸ್ ಇತ್ತು. ಅದರಲ್ಲಿ ತ್ರಿವರ್ಣ ಧ್ವಜವನ್ನು ಎಂದೂ ಗೌರವಿಸಬೇಡಿ ಎಂದಿದ್ದರು. ಅದರಲ್ಲಿರುವ ಮೂರು ಬಣ್ಣಗಳ ಬಗ್ಗೆ ಕೆಟ್ಟದಾಗಿ ಬರೆದಿದ್ದರು. ಈಗ ಘರ್ ಘರ್ ತಿರಂಗ ಎಂದು ನಾಟಕ ಮಾಡುವ ನಿಮಗೆ ನಾಚಿಕೆ ಆಗಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಾವರ್ಕರ್ ಅಂತ ಒಬ್ರಿದ್ರು. ಅವರನ್ನು ಜೈಲಿಗೆ ಹಾಕಿದ್ರು. ದಮ್ಮಯ್ಯ ಅಂತೀನಿ ಬಿಟ್ಟುಬಿಡಿ ಎಂದು ಅವರು ಮುಚ್ಚಳಿಕೆ ಬರೆದುಕೊಟ್ಟರು. ಅವರನ್ನು ಈಗ ಬಿಜೆಪಿಯವರು ವೀರ ಸಾವರ್ಕರ್ ಅಂತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಇನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎಲ್ಲಾ ಕಡೆ ಪಾದಯಾತ್ರೆ ಮಾಡುತ್ತಿದ್ದೇವೆ. 1885ರಲ್ಲಿ ಕಾಂಗ್ರೆಸ್ ಸ್ಥಾಪನೆ ಆಗಿದೆ.
ಅಲ್ಲಿಂದ ಇಲ್ಲಿಯವರಗೆ ದೇಶದ ಒಳಿತಿಗಾಗಿ ಕಾಂಗ್ರೆಸ್ ಕೆಲಸ ಮಾಡಿದೆ. ಆರ್ಎಸ್ಎಸ್ ಕಚೇರಿಯ ಮೇಲೆ 52 ವರ್ಷ ರಾಷ್ಟ್ರಧ್ವಜ ಹಾರಿಸಿಲ್ಲ. ಭಾಗವ ಧ್ವಜ ಹಾರಿಸಿದ್ದರು. ಆರ್ಎಸ್ಎಸ್ನವರೂ, ಬಿಜೆಪಿಯವರೂ ಎಂದೂ ನಿಮ್ಮ ಪರ ಇರಲ್ಲ. ನಾಗರೀಕರೇ ಎಚ್ಚರವಾಗಿರಿ ಎಂದಿದ್ದಾರೆ.