ಗುಡುಗು ಸಹಿತ ಮಳೆಗೆ ಕುರ್ಡಿ ಇಂದ ಮಟಮಾರಿಗೆ ಹೋಗುವಾಗ ಸೈಯಾದ್ ಅಜರ್ ತಂ. ಸೈಯಾದ್ ರಸೂಲ್ ಅಕಾಲಿಕವಾಗಿ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಮಟಮಾರಿ ಗ್ರಾಮದಲ್ಲಿ ನಡೆದಿದ್ದು,
ಇಂದು ಶಾಸಕರ ಕಾರ್ಯಾಲಯದಲ್ಲಿ ಶಾಸಕ ಬಸನಗೌಡ ದದ್ದಲ್ ರವರ ದಿ. ಸೈಯಾದ್ ಅಜರ್ ತಂ. ಸೈಯಾದ್ ರಸೂಲ್ ರವರ ಕುಟುಂಬಕ್ಕೆ ಧೈರ್ಯ ತುಂಬಿ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಮೊತ್ತದ ಪರಿಹಾರ ಚೆಕ್ ನ್ನು ವಿತರಿಸಿದರು.
ಈ ಸಂದರ್ಭದಲ್ಲಿ ನಾಗೇಂದ್ರಪ್ಪ ಮಟಮಾರಿ ರವರು, ಮನೋಜ್ ಗೌಡ, ಮಖ್ತಿಯಾರ್,ಪ್ರವೀಣ್, ಗಂಗಾಧರ ಸಾಹುಕಾರ, ಆರಾನ್, ತನ್ವಿರ್ , ಮೋದಿನ್ ನಾಯಕ್, ಮಹ್ಮದ್ ಹುಸೇನ್,ಅಧಿಕಾರಿಗಳಾದ ರಾಯಚೂರು ತಹಸಿಲ್ದಾರ್ ಬಿ. ರಾಜಶೇಖರ ರವರು, ಆರ್.ಐ ವಿರೇಂದ್ರ, ವಿ.ಎ ಸಂಗಮೇಶ ಉಪಸ್ಥಿತರಿದ್ದರು.