ಹುಬ್ಬಳ್ಳಿ: ಗಣೇಶೋತ್ಸವ ಆಚರಣೆಗೆ ಅವಕಾಶ ಇಲ್ಲ ಎನ್ನುವ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರಹಾಕಿದರು.
ಜಮೀರ್ ಹೇಳಿಕೆ ಖಂಡನೀಯ, ಇದನ್ನು ವಿರೋಧಿಸುತ್ತೇನೆ. ಈದ್ಗಾ ಮೈದಾನ ನಿಮ್ಮ ಅಸ್ತಿನೂ ಅಲ್ಲ, ನಿಮ್ಮ ಪಿತ್ರಾರ್ಜಿತ ಆಸ್ತಿಯೂ ಅಲ್ಲ. ವಕ್ಫ್ ಬೋರ್ಡ್ದೂ ಅಲ್ಲ, ಮುಸ್ಲಿಮರದ್ದೂ ಅಲ್ಲ, ಇದು ಹಿಂದೂಗಳದ್ದು ಅಲ್ಲ. ಸರ್ಕಾರದ ಜಾಗ ಅದು, ಸರ್ಕಾರಿ ಜಾಗದಲ್ಲಿ ನೀವು ನಮಾಜ್ ಮಾಡುತ್ತಾ ಬಂದಿದ್ದೀರಿ. ವಿಧಿವಿಧಾನದ ಮೂಲಕ ವರ್ಷಕ್ಕೆ 2 ಬಾರಿ ನಮಾಜ್ ಮಾಡುತ್ತಾ ಬಂದಿದ್ದೀರಿ. ಹಾಗಾದ್ರೆ ಗಣೇಶೋತ್ಸವಕ್ಕೆ ನಿಮ್ಮ ವಿರೋಧ ಯಾಕೆ ಎಂದರು.
ಈ ರೀತಿಯ ಹೇಳಿಕೆಯಿಂದ ಅಶಾಂತಿ ಮತ್ತು ಗಲಭೆ ಸೃಷ್ಟಿ ಮಾಡುತ್ತಿದ್ದೀರಿ. ಹಿಂದೂಗಳಿಗೆ ಈ ಮೂಲಕ ಹೇಳುತ್ತೇನೆ. ನೀವೇನಾದರೂ ಮುಂದೆ ಜಮೀರ್ಗೆ ಮತ ಹಾಕಿದರೆ, ಗಣೇಶನ ವಿರುದ್ಧವಾಗಿ ನಡೆದುಕೊಂಡ ಹಾಗೆ. ಅವರ ಸೊಕ್ಕನ್ನು ಮುರಿಯಬೇಕು ಎಂದರೆ ಮುಂದಿನ ಚುನಾವಣೆಯಲ್ಲಿ ಸೋಲಿಸಬೇಕು ಎಂದು ಮಾತನಾಡಿದರು.