ಹುಬ್ಬಳ್ಳಿ:ಖಾದಿಗೆ ಪ್ರಧಾನಿ ಮೋದಿಯವರು ನೀಡಿರುವ ಮನ್ನಣೆಯನ್ನು ಕಾಂಗ್ರೆಸ್ಗೆ ಸಹಿಸಲು ಆಗುತ್ತಿಲ್ಲ. ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಸಿದ್ದರಾಮಯ್ಯ ಬಹಳಷ್ಟು ವ್ಯಂಗವಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಐದು ವರ್ಷ ಸಿಎಂ ಆಗಿದ್ದವರು ಅವರು ಧ್ವಜದ ಬಗ್ಗೆ ಈ ರೀತಿಯಲ್ಲಿ ಮಾತನಾಡುವುದು ಶೋಭೆ ತರುವುದಿಲ್ಲ. ಅವರು ಸಿಎಂ ಆಗಿದ್ದಾಗ ಖಾದಿ ಗ್ರಾಮೋದ್ಯೋಗಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎನ್ನುವುದು ನೆನಪು ಮಾಡಿಕೊಳ್ಳಿ. ಖಾದಿ ಗ್ರಾಮೋದ್ಯೋಗ ಕಾರ್ಮಿಕರ ವಿಚಾರದಲ್ಲಿ ಬಿಜೆಪಿ ಮಾಡಿಕೊಟ್ಟಿರುವ ಪ್ರೊತ್ಸಾಹ ಯಾರು ನೀಡಿಲ್ಲ ಎಂದರು.
ಇನ್ನು ಸಿದ್ದರಾಮೋತ್ಸವದಿಂದ ಬಿಜೆಪಿಗೆ ಏನು ಆಗಿಲ್ಲ. ಆದರೆ ಆ ಕಾರ್ಯಕ್ರಮದಿಂದ ಕಾಂಗ್ರೆಸ್ಗೆ ಸೈಡ್ ಎಫೆಕ್ಟ್ ಆಗಿದೆ. ರಾಹುಲ್ ಗಾಂಧಿ ಹೇಳಿದ ಮೇಲೆ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ತಬ್ಬಿಕೊಂಡಿದ್ದಾರೆ. ಪ್ರೀತಿ ಮತ್ತು ಅಭಿಮಾನ ಎನ್ನುವುದು ಒತ್ತಾಯದಿಂದ ಬರುವುದಿಲ್ಲ. ವೇದಿಕೆ ಮೇಲೆ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಹಜವಾಗಿರಲಿಲ್ಲ ಎಂದರು.