ಬೆಂಗಳೂರು: ಸೊಸೈಲ್ ಮೀಡಿಯಾದ ಭಾಗವಾದ ವಾಟ್ಸಾಪ್ ನಲ್ಲಿ ಇನ್ಮುಂದೆ ಗ್ರೂಪ್ ಅಡ್ಮಿನ್ ಗಳಿಗೆ ಡಿಲೀಟ್ ಅಧಿಕಾರ ನೀಡಲಾಗಿದೆ.
ವಾಟ್ಸಾಪ್ ಗ್ರೂಪ್ ನಲ್ಲಿರುವ ಯಾರಾದ್ರೂ ಸದಸ್ಯರು ಪೋಸ್ಟ್ ಮಾಡುವ ಯಾವುದೇ ಫೋಟೋ, ವಿಡಿಯೋ, ಸಂದೇಶಗಳನ್ನು ಡಿಲೀಟ್ ಮಾಡುವ ವೈಶಿಷ್ಟ್ಯವನ್ನು ಈಗ ವಾಟ್ಸಾಪ್ ಪರಿಚಯಿಸಲಾಗಿದೆ.
ಇದುವರೆಗೆ ವಿಡಿಯೋ, ಫೋಟೋ, ಸಂದೇಶ ಪೋಸ್ಟ್ ಮಾಡಿದ ಸದಸ್ಯರಿಗೆ ಮಾತ್ರ ಅದನ್ನು ಡಿಲೀಟ್ ಮಾಡುವ ಅಧಿಕಾರ ಇತ್ತು. ಇನ್ಮುಂದೆ ಅಡ್ಮಿನ್ ಗಳು ಸದಸ್ಯರು ಹಾಕಿದ ವಿಡಿಯೋ, ಪೊಟೋ ಡಿಲೀಟ್ ಅಧಿಕಾರ ನೀಡಲಾಗಿದೆ.